ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ 4.75 ಕೋಟಿ ರೂ. ವಶ
ಬೆಂಗಳೂರು; ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನಗಳಲ್ಲಿ ಸಾಗಿಸುತ್ತಿದ್ದ ಭಾರಿ ಮೊತ್ತದ ಹಣವನ್ನು ಸೀಜ್ ಮಾಡಲಾಗಿದೆ. ಈ ವಾಹನಗಳಲ್ಲಿದ್ದ ಬರೋಬ್ಬರಿ 4.75 ಕೋಟಿ ರೂಪಾಯಿ ಹಣವನ್ನು ಹೆಬ್ಬಗೋಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರೈಟರ್ಸ್ ಕಂಪನಿಯ ಮೂರು ಎಟಿಎಂಗೆ ಹಣ ತುಂಬಿಸುವ ವಾಹನಗಳು ಇವಾಗಿವೆ. ಹಣ ಸಾಗಿಸಲು ಆರ್‌ಬಿಐ ಮಾರ್ಗಸೂಚಿಯನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ.
ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಒಟ್ಟು ಮೊತ್ತದ ಸ್ಕ್ಯಾನ್ ಜನರೇಟ್ ಆಗಿರಬೇಕು. ಆದ್ರೆ ಈ ಮೂರೂ ವಾಹನಗಳಲ್ಲೂ ಸ್ಕ್ಯಾನರ್ ಜನರೇಟ್ ಆಗಿರಲಿಲ್ಲ ಎಂದು ತಿಳಿದುಬಂದಿದೆ.