CinemaCrimeDistricts

ನಟಿ ಶ್ರೀದೇವಿ ಕುಟುಂಬಕ್ಕೆ ಸೇರಿದ 66 ಕೆಜಿ ಬೆಳ್ಳಿ ವಶಕ್ಕೆ

ದಾವಣಗೆರೆ; ಖ್ಯಾತ ನಟಿ ದಿವಂಗತ ಶ್ರೀದೇವಿ ಅವರ ಕುಟುಂಬಕ್ಕೆ ಸೇರಿದ ಭಾರಿ ಪ್ರಮಾಣದ ಬೆಳ್ಳಿ ವಸ್ತುಗಳನ್ನು ದಾವಣಗೆರೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಶ್ರೀದೇವಿ ಪತಿ ಬೋನಿ ಕಪೂರ್‌ ಅವರಿಗೆ ಸೇರಿದ ಕಾರಿನಲ್ಲಿ ಬೆಳ್ಳಿ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಹೆಬ್ಬಾಳ ಟೋಲ್‌ ಬಳಿ ಪರಿಶೀಲನೆ ವೇಳೆ ಕಾರಿನಲ್ಲಿ ಬೆಳ್ಳಿ ವಸ್ತುಗಳು ಸಿಕ್ಕಿವೆ.

ಕಾರಿನಲ್ಲಿ 66  ಕೆಜಿ ತೂಕದ ಬೆಳ್ಳಿ ವಸ್ತುಗಳು ಇದ್ದವು. ಇವುಗಳ ಬೆಲೆ 39 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ವಶಕ್ಕೆ ತೆಗದುಕೊಳ್ಳಲಾಗಿದೆ. ಅಂದಹಾಗೆ, ಬೋನಿ ಕಪೂರ್‌ ಅವರು ಇಷ್ಟೊಂದು ಬೆಳ್ಳಿಯನ್ನು ಕರ್ನಾಟಕಕ್ಕೆ ಏಕೆ ತರಲಾಗಿತ್ತು ಎಂಬುದು ಗೊತ್ತಾಗಿಲ್ಲ.

Share Post