CrimeDistricts

ಮದ್ದೂರು ಬಳಿ ಚಾರ್ಜಿಂಗ್‌ ವೇಳೆ ಎಲೆಕ್ಟ್ರಿಕ್‌ ಬೈಕ್‌ಗೆ ಬೆಂಕಿ

ಮಂಡ್ಯ; ಚಾರ್ಜ್‌ ಮಾಡುತ್ತಿದ್ದಾಗ ಎಲೆಕ್ಟ್ರಿಕ್‌ ಬೈಕ್‌ಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಅದು ಸುಟ್ಟು ಕರಕಲಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಬಳಿಯ ವಳೆಗೆರೆಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಮುತ್ತುರಾಜ್‌ ಎಂಬುವವರಿಗೆ ಸೇರಿದ ಬೈಕ್‌ ಇದಾಗಿದೆ. ಮನೆಯ ಒಳಗೆ ಬೈಕ್‌ ಚಾರ್ಜ್‌ಗೆ ಹಾಕಿದ್ದ ವೇಳೆ ಈ ದುರ್ಘಟನೆ ನಡೆದಿದೆ. 
   ಇದ್ದಕ್ಕಿದ್ದಂತೆ ಬೈಕ್‌ನಲ್ಲಿನ ಬ್ಯಾಟರಿ ಸ್ಫೋಟಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿ ಐದು ಮಂದಿ ಇದ್ದರು. ಆದ್ರೆ ಎಲ್ಲರೂ ಬೈಕ್‌ನಿಂದ ದೂರವಿದ್ದುದರಿಂದ ಯಾರಿಗೂ ಯಾವುದೇ ಅಪಾಯವಾಗಿಲ್ಲ.  ಈ ಸ್ಫೋಟದಿಂದ ಹತ್ತಿರದಲ್ಲೇ ಇದ್ದ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್ ಸೇರಿ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.
Share Post