HealthNationalScience

ಹೃದ್ರೋಗಿಗಳಿಗಾಗಿ ಬಂತು ʻರಾಮ್‌ ಕಿಟ್‌ʼ; ಏನಿದರ ಉಪಯೋಗ..?

ಕಾನ್ಪುರ; ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸುತ್ತಿರುವಾಗಲೇ, ಉತ್ತರ ಪ್ರದೇಶದ ಆಸ್ಪತ್ರೆಯೊಂದು ಹೃದ್ರೋಗಿಗಳಿಗೆ ವಿಶೇಷ ಕೊಡುಗೆಯೊಂದು ನೀಡಿದೆ.ಹೃದ್ರೋಗಿಗಳಿಗೆ ತಕ್ಷಣಕ್ಕೆ ಅಗತ್ಯವಿರುವ ಔಷಧದ ಕಿಟ್‌ ಒಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಅದಕ್ಕೆ `ರಾಮ್‌ ಕಿಟ್‌ʼ ಎಂದು ಹೆಸರಿಡಲಾಗಿದೆ. ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್ಸಿಟಿಟ್ಯೂಟ್ ಆಫ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿ ಈ ಕಿಟ್‌ ಅನ್ನು ಅಭಿವೃದ್ಧಿಪಡಿಸಿದೆ. 

ಪ್ರಯಾಗ್ರಾಜ್ ಜಿಲ್ಲೆಯ ಸುಮಾರು 5 ಸಾವಿರ ಕುಟುಂಬಗಳಿಗೆ ಈ ಕಿಟ್‌ ಹಂಚಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಕಿಟ್‌ ರಾಮನ ಚಿತ್ರದೊಂದಿಗೆ ಇರಲಿದೆ. ಇದರಲ್ಲಿ ಜೀವ ಉಳಿಸುವ ಔಷಧಿಗಳು ಹಾಗೂ ಆಸ್ಪತ್ರೆಯ ದೂರವಾಣಿ ಸಂಖ್ಯೆ ಇರಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾವು ಚಿಕಿತ್ಸೆ ಮಾತ್ರ ಕೊಡುತ್ತೇವೆ. ಆದ್ರೆ ಗುಣಪಡಿಸೋದು ರಾಮ ಎಂಬ ಪರಿಕಲ್ಪನೆಯಲ್ಲಿ ಈ ಕಿಟ್‌ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

ರಾಮ್ ಕಿಟ್‌ನಲ್ಲಿ ಇಕೋಸ್ಪಿನ್ , ರೋಸುವಾಸ್ಟಾಟಿನ್  ಮತ್ತು ಸೋರ್ಬಿಟ್ರೇಟ್  ಔಷಧಗಳನ್ನು ಇರಿಸಲಾಗಿರುತ್ತದೆ. ಹೃದಯ ಸಮಸ್ಯೆ ಬಂದರೆ ಈ ಔಷಧಿಗಳನ್ನು ತೆಗೆದುಕೊಂಡರೆ ಜೀವ ಉಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಔಷಧಗಳನ್ನು ತೆಗೆದುಕೊಂಡ ನಂತರ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ ಎಂದು ತಿಳಿದುಬಂದಿದೆ.

 

Share Post