Bengaluru

ರಾಜ್ಯ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ; ಯಾವ ಜಿಲ್ಲೆಗೆ ಎಷ್ಟು ಕೋಟಿ..?

ಬೆಂಗಳೂರು; ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಹೀಗಾಗಿ ಕೇಂದ್ರದಿಂದ ಬರ ಪರಿಹಾರ ಘೋಷಣೆಗೆ ಆಗ್ರಹಗಳು ಕೇಳಿಬರುತ್ತಿದ್ದವು. ಆದ್ರೆ ಕೇಂದ್ರ ಸರ್ಕಾರದಿಂದ ಇದುವರೆಗೂ ಯಾವುದೇ ಬರ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಈ ನಡುವೆ ರಾಜ್ಯ ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. SDRF  ಅಡಿಯಲ್ಲಿ 31 ಜಿಲ್ಲೆಗಳಿಗೆ 324 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

ರಾಜ್ಯದ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಬರಪರಿಹಾರವಾಗಿ 17 ಸಾವಿರ ಕೋಟಿ ರೂಪಾಯಿ ಕೇಳಲಾಗಿದೆ. ಆದ್ರೆ ಕೇಂದ್ರಿಂದ ಇನ್ನೂ ಯಾವುದೇ ಅನುದಾನ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಸಣ್ಣ ಪ್ರಮಾಣದ ಪರಿಹಾರ ಹಣ ಬಿಡುಗಡೆ ಮಾಡಿದೆ.

ಯಾವ ಜಿಲ್ಲೆಗೆ ಎಷ್ಟು ಅನುದಾನ..?

=========================
ಬೆಂಗಳೂರು ನಗರ- 7.50 ಕೋಟಿ.
ಬೆಂಗಳೂರು ಗ್ರಾಮಾಂತರ- 6 ಕೋಟಿ.
ರಾಮನಗರ-7.50 ಕೋಟಿ.
ಕೋಲಾರ – 9 ಕೋಟಿ.
ಚಿಕ್ಕಬಳ್ಳಾಪುರ- 9 ಕೋಟಿ.
ತುಮಕೂರು-15 ಕೋಟಿ.
ಚಿತ್ರದುರ್ಗ- 9 ಕೋಟಿ.
ದಾವಣಗೆರೆ- 9 ಕೋಟಿ.
ಚಾಮರಾಜನಗರ-7.50 ಕೋಟಿ
ಮೈಸೂರು – 13.50 ಕೋಟಿ.
ಮಂಡ್ಯ- 10.50 ಕೋಟಿ.
ಬಳ್ಳಾರಿ- 7.50 ಕೋಟಿ.
ಕೊಪ್ಪಳ- 10.50 ಕೋಟಿ.
ರಾಯಚೂರು- 9 ಕೋಟಿ.
ಕಲಬುರ್ಗಿ- 16.50 ಕೋಟಿ.
ಬೀದರ್- 4.50 ಕೋಟಿ.
ಬೆಳಗಾವಿ- 22.50 ಕೋಟಿ.
ಬಾಗಲಕೋಟೆ- 13.50 ಕೋಟಿ.
ವಿಜಯಪುರ- 18 ಕೋಟಿ.
ಗದಗ-10.50 ಕೋಟಿ.
ಹಾವೇರಿ-12 ಕೋಟಿ.
ಧಾರವಾಡ-12 ಕೋಟಿ.
ಶಿವಮೊಗ್ಗ-10.50 ಕೋಟಿ.
ಹಾಸನ- 12 ಕೋಟಿ.
ಚಿಕ್ಕಮಗಳೂರು-12 ಕೋಟಿ.
ಕೊಡಗು-7.50 ಕೋಟಿ.
ದಕ್ಷಿಣ ಕನ್ನಡ- 3 ಕೋಟಿ.
ಉಡುಪಿ- 4.50 ಕೋಟಿ.
ಉತ್ತರ ಕನ್ನಡ-16.50 ಕೋಟಿ.
ಯಾದಗಿರಿ-9 ಕೋಟಿ.
ವಿಜಯನಗರ-9 ಕೋಟಿ.

Share Post