Bengaluru

ಮಣಪ್ಪುರಂ ಗೋಲ್ಡ್‌ಗ ಕಂಪನಿಗೆ ಸಿಬ್ಬಂದಿಯಿಂದಲೇ ಮೋಸ; ನಾಲ್ವರು ಅರೆಸ್ಟ್‌

ಬೆಂಗಳೂರು: ಮಣಪ್ಪುರಂ ಗೋಲ್ಡ್‌ ಫೈನಾನ್ಸ್‌ನಲ್ಲಿ ಸಿಬ್ಬಂದಿಯೇ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಣಪ್ಪುರಂ ಗೋಲ್ಡ್‌ ಫೈನಾನ್ಸ್‌ ಕಂಪನಿಗ ರೀಜನಲ್‌ ಮ್ಯಾನೇಜರ್‌ ಪೊಲೀಸರಿಗೆ ದೂರು ನೀಡಿದ್ದು, ಯಶವಂತಪುರ ಪೊಲೀಸರು ನಾಲ್ವರು ಸಿಬ್ಬಂದಿಯನ್ನು ಅರೆಸ್ಟ್‌ ಮಾಡಿದ್ದಾರೆ. 

ಮಣಪ್ಪುರಂ ಗೋಲ್ಡ್‌ ಸಂಸ್ಥೆ ಸಿಬ್ಬಂದಿಯಾದ ಅಮರ್ ನಾಥ್, ಶಿವಕುಮಾರ್, ಮೋನಿಷಾ ಸೇರಿದಂತೆ ನಾಲ್ವರು ಬಂಧನಕ್ಕೊಳಗಾಗಿದ್ದಾರೆ. ಯಶವಂತಪುರ ಬ್ರ್ಯಾಂಚ್​ನ ಮಣಪುರಂ ಗೋಲ್ಡ್ ಫೈನಾನ್ಸ್‌ನಲ್ಲಿ ಸಿಬ್ಬಂದಿಗಳು ಅಡವಿಟ್ಟ ಚಿನ್ನವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್​ಗಳು ದಾಖಲಾಗಿವೆ.

ಆರೋಪಿಗಳಿಂದ ಕಂಪನಿಗೆ ಬರೊಬ್ಬರಿ 2 ಕೋಟಿ ನಷ್ಟವಾಗಿದ್ದು, 18 ವಿವಿಧ ಖಾತೆಗಳ ತೆರೆದು ಅವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಸಿಸ್ಟಂನಲ್ಲಿ ಸುಳ್ಳು ಎಂಟ್ರಿ ಮಾಡುವ ಮೂಲಕ ಕಂಪನಿಗೆ ಮೋಸ ಮಾಡಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Share Post