Bengaluru

ದೊಡ್ಡ ಪರದೆ ಮೇಲೆ ರಾಕಿ ಭಾಯ್‌ ಅಬ್ಬರ; ಕೆಜಿಎಫ್‌-2 ಮೇನಿಯಾ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2(KGF-2) ಸಿನಿಮಾ ವಿಶ್ವಾದ್ಯಂತ ತೆರೆಕಂಡಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ 5 ಕಡೆಗಳಲ್ಲಿ ಫಸ್ಟ್ ಶೋ ಪ್ರದರ್ಶನ ಮಾಡಲಾಯಿತು. ರಾಜ್ಯದ 550ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಿತ್ರ ತೆರೆಕಂಡಿದೆ. ಭಾರತದಾದ್ಯಂತ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ಪ್ರದರ್ಶನವಾಗುತ್ತಿದೆ.

ಇಡೀ ವಿಶ್ವದ ಚಿತ್ರರಂಗ ತಿರುಗಿ ನೋಡುತ್ತಿರುವ ರೀತಿಯಲ್ಲಿ ಕನ್ನಡಿಗರು ತೆರೆಗೆ ತಂದಿರುವ ಚಿತ್ರಕ್ಕೆ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್ ಸಿಕ್ಕಿರುವುದು ವಿಶೇಷ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂಗಳಲ್ಲಿ ಸಹ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮೊದಲ ದಿನವೇ ಚಿತ್ರ ಕೋಟಿ ಕೋಟಿ ರೂಪಾಯಿ ಗಳಿಸುವುದು ಖಚಿತವಾಗಿದೆ. ಇಂದು ಬೆಳಗ್ಗೆ ಮೊದಲ ಶೋ ನೋಡಿ ಬಂದವರು ರಾಕಿಬಾಯ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅನೇಕ ಮಹಿಳಾ ಅಭಿಮಾನಿಗಳು, ಮಕ್ಕಳು ಫಿದಾ ಆಗಿರುವುದು ವಿಶೇಷ. 5 ಭಾಷೆಗಳಲ್ಲಿ 70 ದೇಶಗಳಲ್ಲಿ ಕೆಜಿಎಫ್-2 ಬಿಡುಗಡೆಯಾಗಿದೆ. ಉತ್ತರ ಭಾರತದಲ್ಲಿ ಕೂಡ ಕೆಜಿಎಫ್-2 ಹವಾ ಆರಂಭವಾಗಿದೆ. ಕರ್ನಾಟಕದಲ್ಲಿ ಎಲ್ಲಾ ಥಿಯೇಟರ್ ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.

Share Post