BengaluruCrime

ಪಾಕಿಸ್ತಾನದ ಮಹಿಳೆಯನ್ನು ಬಂಧಿಸಿದ ಬೆಂಗಳೂರು ಪೋಲಿಸ್

ಬೆಂಗಳೂರು; ಬೆಂಗಳೂರಿನಲ್ಲಿ ಇಕ್ರಾ ಜೀವನಿಎಂಬ ಪಾಕಿಸ್ತಾನ ಮೂಲದ ಮಹಿಳೆಯನ್ನ ಬಂಧಿಸಲಾಗಿದೆ.ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನ ಮದುವೆಯಾಗಿ ನಗರದಲ್ಲಿ ಕಳೆದ ಹಲವು ದಿನಗಳಿದಂದ ಇಕ್ರಾ ಜೀವನಿ ವಾಸವಾಗಿದ್ದಳು.ನೇಪಾಳದ ಪಾಸ್ ಪೋರ್ಟ್ ಬಳಸಿ ನಗರಕ್ಕೆ ಬಂದಿದ್ದಳು,ಇಲ್ಲಿಗೆ ಬಂದು ಪಾಕಿಸ್ತಾನದಲ್ಲಿರುವ ತನ್ನ ತಾಯಿಯನ್ನ ಸಂಪರ್ಕಕ್ಕೆ ಯತ್ನಿಸಿದ್ದಾಳೆ ಆಗ ಇದು ಗಪ್ತಚರ ಇಲಾಖೆಯ ಗಮನಕ್ಕೆ ಬಂದಿದೆ ಕೂಡಲೆ ಗುಪ್ತಚರ ಇಲಾಖೆಯು ರಾಜ್ಯ ಪೊಲೀಸ್ರಿಗೆ ಮಾಹಿತಿ ನೀಡಿದೆ,ಈ ಮಾಹಿತಿಯನ್ನ ಅಧರಿಸಿ ಸರ್ಜಾಪುರ ರಸ್ತೆಯ ಜನ್ನಸಂದ್ರದಲ್ಲಿ  ವಾಸವಾಗಿದ್ದ ಆಕೆಯನ್ನ ಪೊಲೀಸರು ಬಂಧಿಸಿದ್ದಾರೆ.

ಇದು ಇಂಡಿಯಾ ಟು ಪಾಕಿಸ್ತಾನ್ ಲವ್ ಸ್ಟೋರಿ

ಹೆಚ್ ಎಸ್ ಆರ್ ಲೇಔಟ್ ನ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಮುಲಾಯಂ ಸಿಂಗ್ ಗೇಮಿಂಗ್ ಆ್ಯಪ್‌ LUDO ನಲ್ಲಿ ಪಾಕಿಸ್ತಾನದ ಯುವತಿ ಪರಿಚಯವಾಗಿದೆ,ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದಾರೆ.ಈ ಹಿನ್ನೆಲೆ ಯುವತಿಯನ್ನ ಭಾರತಕ್ಕೆ ಮುಲಾಯಂ ಸಿಂಗ್ ಯಾದವ್ ಕರೆತಂದಿದ್ದಾನೆ ಎನ್ನಲಾಗುತ್ತಿದೆ.ಇಕ್ರಾ ಜೀವಾನಿ ಮೂಲತಹ ಪಾಕಿಸ್ತಾನದ ಹೈದರಾಬಾದ್ ನವಳು.
ರವ ಯಾದವ್ ಎನ್ನುವ ಹೆಸರಲ್ಲಿ ನಕಲಿ ಅಧಾರ್ ಕಾರ್ಡ್ ಮಾಡಿಸಿ ಮುಲಾಯಂ ಸಿಂಗ್ ಈ ಮಹಿಳೆನ್ನ ನೇಪಾಳದ ಮೂಲಕ ಬಿಹಾರಕ್ಕೆ ಕರೆಸಿ ಅಲ್ಲಿಂದ ರಾಜ್ಯಕ್ಕೆ ಕರೆತಂದಿದ್ದಾನೆ.ಇವರಿಂದ ಸರಿಯಾಗಿ ದಾಖಲೆ ಪಡೆಯದೆ  ಗೋವಿಂದ ರೆಡ್ಡಿ ಎಂಬಾತ ಇವರುಗೆ ಮನೆ ಬಾಡಿಗೆ ನೀಡಿದ್ದ.ಸದ್ಯ ಬೆಳ್ಳಂದೂರು ಪೋಲೀಸರು ಪಾಕಿಸ್ತಾನಿ ಯುವತಿಯ ಜೊತೆಗೆ ಮುಲಾಯಂ ಸಿಂಗ್ ಯಾದವ್ ಹಾಗೂ ಗೋವಿಂದ ರೆಡ್ಡಿ ಇಬ್ಬರನ್ನೂ ಬಂಧಿಸಿ ವಿಚಾರಣೆ ಮಾಡುತಿದ್ದಾರೆ.

Share Post