BengaluruCinema

ಪುನೀತ್‌ ಕನಸಿನ ಕೂಸು ʻಗಂಧದ ಗುಡಿʼ ರಾಜ್ಯೋತ್ಸವಕ್ಕೆ ಬಿಡುಗಡೆ

ಬೆಂಗಳೂರು; ಪುನೀತ್ ರಾಜ್ ಕುಮಾರ್ ಬಹಳ ಇಷ್ಟಪಟ್ಟು ಕಾಡುಮೇಡು ಸುತ್ತಿ ಮಾಡಿದ ʻಗಂಧದ ಗುಡಿʼ ಕಿರುಚಿತ್ರ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕನ್ನಡ ರಾಜ್ಯೋತ್ಸವಕ್ಕೆ ಅಂದ್ರೆ ನವೆಂಬರ್‌ ತಿಂಗಳಲ್ಲಿ ಥಿಯೇಟರ್‌ಗಳಲ್ಲಿ ಈ ಕಿರುಚಿತ್ರ ರಿಲೀಸ್‌ ಮಾಡಲು ಚಿತ್ರತಂಡ ತಿರ್ಮಾನ ಮಾಡಿದೆ.

ಈ ಡಾಕ್ಯುಮೆಂಟರಿಯ ಟ್ರೈಲರ್ ಕಳೆದ ವರ್ಷ ನವೆಂಬರ್ ಒಂದರಂದು ರಿಲೀಸ್ ಆಗಬೇಕಿತ್ತು. ಇದಕ್ಕಾಗಿ ಅಪ್ಪು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದ್ರೆ ನವೆಂಬರ್‌ ಒಂದಕ್ಕೂ ಕೆಲ ದಿನ ಮೊದಲು ಅಪ್ಪು ನಮ್ಮನ್ನು ಅಗಲಿದ್ದರು. ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಟ್ರೈಲರ್ ರಿಲೀಸ್ ಮಾಡಬೇಕೆನ್ನುವುದು ಅಪ್ಪು ಕನಸಾಗಿದ್ದರಿಂದ ಅದೇ ತಿಂಗಳು ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನವೆಂಬರ್ ನಲ್ಲಿ ನೂರಾರು ಥಿಯೇಟರ್ ನಲ್ಲಿ ಈ ಡಾಕ್ಯುಮೆಂಟರಿ ತೆರೆ ಕಾಣಲಿದೆ ಎಂದು ಹೇಳಲಾಗುತ್ತಿದೆ.

Share Post