Bengaluru

ಬಿಬಿಎಂಪಿಯಲ್ಲಿ ಕರೆಯಲಾಗಿದ್ದ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯ

ಬೆಂಗಳೂರು; ಬಿಬಿಎಂಪಿ ಮುಖ್ಯ‌ ಆಯುಕ್ತ ತುಷಾರ್ ಗಿರಿನಾಥ್ ಆವರು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಸಿಬ್ಬಂದಿ ಬೇಡಿಕೆಗಳನ್ನು ಸಲ್ಲಿಸಿ ಬಗೆಹರಿಸುತ್ತೇವೆ ಏಂದು ಭರವಸೆ ನೀಡಿದ್ದಾರೆ.ಈ ಹಿನ್ನಲೆಯಲ್ಲಿ‌ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.

ನೌಕರರ ಸಂಘ ತಮ್ಮ ಹಲವು ವರ್ಷಗಳ ಬೇಡಿಕೆ ನೀಡಿದೆ ಈ ಕೂಡಲೇ ಅವರ ಮುಷ್ಕರ ಅಂತ್ಯ ಮಾಡಿ ಕೆಲಸ ಆರಂಭ ಮಾಡಲಿದ್ದಾರೆ ಇವತ್ತು ಮಾತುಕತೆ ನಡೆಸಿದ್ದೇನೆಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಕೇಳಿ ಕೊಂಡಡಿದ್ದರಿಂದ ಸಾಂಕೇತಿಕ ಪ್ರತಿಭಟನೆ ಮಾಡಿದ್ದಾರೆ. ಈಗ ಭರವಸೆ ಈಡೇರಿಸೋಕೆ ನನ್ನ ಪ್ರಯತ್ನ ಮಾಡುತ್ತೇನೆ ಎಂದ ನಂತರ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.

ಕೆಲವು ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಬೇಕಾಗಿದೆ.ಅದನ್ನು ನಾನು‌ ಹಾಗು ನಮ್ಮ ತಂಡ ಸರ್ಕಾರದ ಚರ್ಚೆ ಮಾಡ್ತೀವಿ,ನಾವೆಲ್ಲಾ‌ ಒಂದೇ ಕುಟುಂಬದವರು, ಹೀಗಿರೋವಾಗ ಸಣ್ಣಪುಟ್ಟ ಸಮಸ್ಯೆ ಆಗುತ್ತೆ,ಬೇಡಿಕೆಗಳ ಪೈಕಿ ನೇಮಕಾತಿಯದ್ದು ಹೆಚ್ಚು ಮಹತ್ವದ್ದಾಗಿದೆ.ಸರ್ಕಾರಕ್ಕೆ ಬಿಬಿಎಂಪಿ ಪರವಾಗಿ ನಮ್ಮ ಬೇಡಿಕೆ‌ ನಾವು ಕೊಡ್ತೀವಿ.ಹೊಸ‌ ನೇಮಕಾತಿ ಯಾಕೆ,ಇರೋ ಜನರನ್ನೇ ಬಳಸಿ ಕೆಲಸ ಮಾಡಿಸಲಿ ಅಂತ ಕೆಲವೊಮ್ಮೆ ಸರ್ಕಾರ ಯೋಚಿಸುತ್ತೆ.ಈ ಕಾರಣದಿಂದಲೇ ಕಳೆದ ಹಲವಾರು ವರ್ಷಗಳಿಂದ ಸಮಸ್ಯೆ ಆಗ್ತಿತ್ತು,ಮುಂದಿನ ವರ್ಷ ಖಂಡಿತಾ ನೇಮಕಾತಿ ಆಗುತ್ತೆ ಎಂದು ಬಿಬಿಎಂಪಿ ಮುಖ್ಯ‌ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಪ್ರತಿಭಟನೆ ಅಂತ್ಯಗೊಳಿಸಿದ ನಂತರ ಮಾತನಾಡಿದ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಬಿಬಿಎಂಪಿ ಮುಖ್ಯ ಆಯುಕ್ತರು ನಮ್ಮ ಬೇಡಿಕೆ ಈಡೇರಿಸೋ ಭರವಸೆ‌ ನೀಡಿದ್ದಾರೆ.ಅವರ ವ್ಯಾಪ್ತಿಗೆ ಬರುವ 3 ಬೇಡಿಕೆಗಳ ಈಡೇರಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ.ಉಳಿದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಜೊತೆ ಮಾತಾಡೋದಾಗಿ ತಿಳಿಸಿದ್ದಾರೆ.ಈ ಹಿನ್ನೆಲೆ ಇಂದು ಕರೆಯಲಾಗಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದರು.

Share Post