2 ಕೋಟಿ ಕದ್ದು, ಚೀಲದಲ್ಲಿ ಬಚ್ಚಿಟ್ಟಿದ್ದ ಆರೋಪಿಗಳ ಅಂದರ್
ಬೆಂಗಳೂರು: ಸಂದೀಪ್ ಲಾಲ್ ಎಂಬುವವರ ಮನೆಯಲ್ಲಿ 2 ಕೋಟಿಗೂ ಹೆಚ್ಚು ನಗದು ಹಾಗೂ ಚಿನ್ನಾಭರಣ ಕದ್ದಿದ್ದ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಸುನೀಲ್ ಹಿಂದೆ ಕೂಡಾ ಕಳ್ಳತನ ಪ್ರಕರಣವೊಂದರಲ್ಲಿ ಅಂದರ್ ಆಗಿದ್ದು, ಈ ವೇಳೆ ಪಡೆದಿದ್ದ ಫಿಂಗರ್ ಪ್ರಿಂಟ್‌ನಿಂದಾಗಿ ಆತ ಸಿಕ್ಕಿಬಿದ್ದಿದ್ದಾನೆ.
ಸಂದೀಪ್ ಮನೆ ಕಳ್ಳತನ ಪ್ರಕರಣ ಸ್ಥಳ ಪರಿಶೀಲನೆ ವೇಳೆ ಫಿಂಗರ್ ಫ್ರಿಂಟ್ ಮ್ಯಾಚ್ ಮಾಡಿದಾಗ ಆರೋಪಿ ಯಾರೆಂದು ಗೊತ್ತಾಗಿದ್ದಾನೆ. ಇದರ ಆಧಾರದ ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಚೀಲದಲ್ಲಿ ಹಣ ತುಂಬಿ ಮನೆಯಲ್ಲೆ ಇಟ್ಟಿದ್ದರು. ನಂತರ ಆರೋಪಿ ದಿಲೀಪ್ ಮಹದೇಶ್ವರ ಬೆಟ್ಟಕ್ಕೆ ಹೋಗಿ ಅವಿತು ಕುಳಿತಿದ್ದನೆಂದು ಗೊತ್ತಾಗಿದೆ. ಈ ಪೈಕಿ ಸುಬ್ರಹ್ಮಣ್ಯ ನಗರ ಮನೆಯಲ್ಲೇ ಆರೋಪಿ ಸುನಿಲ್ ಸಿಕ್ಕಿ ಬಿದ್ದಿದ್ದಾನೆ.
ಮತ್ತೊಬ್ಬ ಆರೋಪಿ ದಿಲೀಪ್ ಮಾಗಡಿಯ ಮಾಚೋಹಳ್ಳಿಯವನು. ಸುನೀಲ್ ಮತ್ತು ದಿಲೀಪ್ ಜೈಲಿನಲ್ಲಿದ್ದಾಗ ಪ್ರೆಂಡ್ಸ್ ಆಗಿದ್ದರು. ಡ್ರಗ್ ಕೇಸಲ್ಲಿ ದಿಲೀಪ್ ಜೈಲು ಸೇರಿದ್ದ. ಜೈಲಿನಲ್ಲೆ ನಿನ್ನ ಜೀವನ ಬದಲಾಯಿಸ್ತಿನಿ ಬಾ ಎಂದು ಸುನೀಲ್ ಪುಸಲಾಯಿಸಿದ್ದ ಎಂದು ತಿಳಿದುಬಂದಿದೆ.