Bengaluru

ಬಂದ್‌ನಿಂದ ಯೂಟರ್ನ್‌ ಹೊಡೆದ ಪ್ರವೀಣ್‌ ಶೆಟ್ಟಿ

ಬೆಂಗಳೂರು: ಕನ್ನಡ ಬಾವುಟ ಮತ್ತು ದೇಶಭಕ್ತರ ಪುತ್ಥಳಿಗೆ ಅಪಮಾನ ಮಾಡಿದ ಎಂಇಎಸ್‌ ಬ್ಯಾನ್ ವಿರುದ್ಧ ನಾಳೆ ಹಮ್ಮಿಕೊಂಡಿದ್ದ ಬಂದ್‌ನಿಂದ ಪ್ರವೀಣ್‌ ಶೆಟ್ಟಿ ಯೂಟರ್ನ್‌ ಹೊಡೆದಿದ್ದಾರೆ. ಬಂದ್‌ ತೀರ್ಮಾನದ ವಿರುದ್ಧ ಅತಿಯಾದ ಟೀಕೆಗಳು ಬರ್ತಿವೆ. ಜೊತೆಗೆ ಹೊಸ ವರ್ಷ ಹಿನ್ನೆಲೆ ಸರ್ಕಾರ ಈಗಾಗಲೇ ನೈಟ್‌ ಕರ್ಪ್ಯೂ ಬೇರೆ ಜಾರಿ ಮಾಡಿದೆ. ಇಂತಹ ಸಂದರ್ಭದಲ್ಲಿ ನೀವು ಬಂದ್‌ ಮಾಡಿದ್ರೆ ನಮ್ಮ ಆರ್ಥಿಕ ಸ್ಥಿತಿಯ ಗತಿಯೇನು? ಎಂದು ವ್ಯಾಪಾರಸ್ಥರು, ಉದ್ಯಮಿಇಗಳು ನನ್ನನ್ನು ಪ್ರಶ್ನೆ ಮಾಡಿದ್ದಾರೆ.

ಜೊತೆಗೆ ಸಿನಿಮಾ ಇಂಡಸ್ಟ್ರಿ ಕೂಡ ಇದರಿಂದ ಹೊರತಾಗಿಲ್ಲ ಎಲ್ಲರೂ ಡಿಸೆಂಬರ್‌ 31ರಂದು ಜನ ಆಚೆ ಬಂದು ಸ್ವಲ್ಪ ಸಮಯ ಕಳೆಯುತ್ತಾರೆ. ಹೀಗಿರುವಾಗ ಬಂದೆ ಮಾಡುದ್ರೆ ನಮಗೆ ತುಂಬಾ ನಷ್ಟ ಆಗುತ್ತೆ. ಸರ್ಕಾರದ ಕೊರೊನಾ ನಿಯಮಾವಳಿಗಳು ಜೊತೆಗೆ ನಿಮ್ಮ ಬಂದ್‌ ಎರಡರಿಂದಲೂ ನಾವು ತತ್ತರಿಸಿ ಹೋಗ್ತೇವೆ ಎಂದು ಉದ್ಯಮಿ, ವ್ಯಾಪಾರಸ್ಥರು, ಸಿನಿಮಾ ಮದಿ ನಮಗೆ ಪತ್ರ ಬರೆದಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಬಂದ್‌ ಮಾಡ್ಬೇಕಾ? ಬೇಡ್ವಾ ಎಂಬುದನ್ನು ನಾಳೆ ತೀರ್ಮಾನ ಮಾಡ್ತೇವೆ ಎಂದಿದ್ದಾರೆ.

ಈಗಾಗಲೇ ಸುಮಲತಾ, ನಟ ಶಿವರಾಜ್‌ ಕುಮಾರ್‌ ಸಹ ಮನವಿ ಮಾಡಿದ್ದಾರೆ ಬಂದ್‌ ಬೇಡ ಎಂದು ಈ ಬಗ್ಗೆ ನಾನು ವಾಟಾಳ್‌ ನಾಗರಾಜ್‌ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡ್ತೇವೆ. ನಾವು ಮಾಡುವ ಬಂದ್‌ನಿಂದ ನಮ್ಮ ಜನರಿಗೆ ನಷ್ಟವುಂಟಾಗುವುದು ಬೇಡ. ಬಂದ್‌ಗೆ ಬೇರೆ ದಿನಾಂಕ ಗೊತ್ತು ಮಾಡುವುದಾಗಿ ಹೇಳ್ತೇನೆ ಈ ಬಗ್ಗೆ ಅವರ ನಿರ್ಧಾರದ ಮೇಲೆ ನಾಳಿನ ಬಂದ್‌ ಬಗ್ಗೆ ಮಾಹಿತಿ ನೀಡ್ತೇವೆ ಎಂದಿದ್ದಾರೆ.

 

Share Post