ನಗರದಲ್ಲಿ ಇಂದಿನಿಂದ ಫ್ಲೈಓವರ್ ಬಂದ್
ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ೨ ದಿನ ಬಾಕಿ ಇದೆ. ಈಗಾಗಲೇ ಹೊಸ ವರ್ಷ ಬರ ಮಾಡಿಕೊಳ್ಳುವುದಕ್ಕೆ ಸಿದ್ಧತೆ ನಡೆಸಿದೆ. ಅದಲ್ಲದೆ ನಗರದಲ್ಲಿ ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದ್ದರಿಂದಾಗ ಜನತೆಗೆ ಹೊಸ ವರ್ಷದ ಆಚರಣೆ ಕತ್ತರಿ ಬೀಳಲಿದೆ. ಡಿ.೩೧ ರಂದು ಹೊಸ ವರ್ಷ ಆಚರಣೆಗೆ ನಗರದಲ್ಲಿ ಕೆಲ ನಿರ್ಬಂಧಗಳನ್ನು ಹೇರಿ ಮತ್ತಷ್ಟು ಬಿಗಿ ಭದ್ರತೆ ಕೈಗೊಂಡಿದೆ.
ಇಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ಕೆಲ ಅಧಿಕಾರಿಗಳೊಂದಿಗೆ ತುರ್ತು ಸಭೆ ಕರೆದಿದ್ದರು. ಈ ವೇಳೆ ಮತ್ತಷ್ಟು ಬಿಗಿ ಭದ್ರತೆ ಕುರಿತು ಚರ್ಚೆ ನಡೆಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಪಂಥ್, ಮೊದಲ ದಿನವ ಕರ್ಫ್ಯೂಗೆ ಉತ್ತಮ ಬೆಂಬಲ ಸಿಕ್ಕಿದೆ. ಪೊಲೀಸರು ಕೂಡ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಂದಿನಿಂದ ಫ್ಲೈಓವರ್ ಬಂದ್ ಮಾಡಲಾಗಿದೆ ಎಂದರು.