ಸತ್ಯಸಾಯಿ ಮೆಡಿಕಲ್ ಕಾಲೇಜಿಗೆ ಅನುಮತಿ ವಿಚಾರ; ಡಿಕೆಶಿ, ಅಶ್ವತ್ಥನಾರಾಯಣ ವಾಗ್ಯುದ್ಧ
ಬೆಂಗಳೂರು; ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಸ್ಥಾಪನೆಯಾಗಿರುವ ಸುಸಜ್ಜಿತ ಮೆಡಿಕಲ್ ಕಾಲೇಜಿಗೆ ಅನುಮತಿ ನೀಡುವ ಬಗ್ಗೆ ಮಾಜಿ ಸಚಿವ ಅಶ್ವತ್ಥನಾರಾಯಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಕಲಾಪದಲ್ಲಿ ತೀವ್ರ ವಾಗ್ವಾದ ನಡೆಯಿತು. ಸುಸಜ್ಜಿತವಾಗಿ ಕಾಲೇಜು ಕಟ್ಟಡ ಕಟ್ಟಲಾಗಿದೆ. ಉಚಿತ ಅಡ್ಮಿಷನ್ ಹಾಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಕಾಲೇಜಿಗೆ ಅನುಮತಿ ನೀಡಿ ಎಂದು ಅಶ್ವತ್ಥನಾರಾಯಣ ಆಗ್ರಹಿಸಿದರು. ಆಗ ಮಾತನಾಡಿದ ಡಿ.ಕೆ.ಶಿವಕುಮಾರ್ ನಿಮ್ಮ ಕಾಲದಲ್ಲಿ ಯಾಕೆ ಅನುಮತಿ ನೀಡಲಿಲ್ಲ ಎಂದು ಪ್ರಶ್ನೆ ಮಾಡಿದರು. ಇದು ವಾಗುದ್ಧಕ್ಕೆ ಕಾರಣವಾಗಿತು.
ನಿಮ್ಮ ಅವಧಿಯಲ್ಲಿ ಯಾಕೆ ಅನುಮತಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಅಶ್ವತ್ಥನಾರಾಯಣ ಆಕ್ರೋಶಗೊಂಡರು. ನೀವು ಅನುಮತಿ ಕೊಡುತ್ತೀರೋ ಇಲ್ಲವೋ ಅದು ಮೊದಲು ಹೇಳಿ ಎಂದರು. ಅನುಮತಿ ಕೊಡೋದಕ್ಕೆ ನಿಮಗೇನಾದರೂ ಕಷ್ಟ ಇದೆಯಾ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಯುತ್ತರ ನೀಡಿದ ಡಿ.ಕೆ.ಶಿವಕುಮಾರ್, ನಿಮಗೆ ಏನು ಕಷ್ಟ ಆಗಿತ್ತು ಅನುಮತಿ ನೀಡೋದಕ್ಕೆ ಎಂದು ಪ್ರಶ್ನಿಸಿದರು. ಇದು ಅಹಂನ ಮಾತುಗಳು, ಗ್ಯಾರೆಂಟಿ ಕೊಡದೆ ಅಧಿಕಾರದಲ್ಲಿರುವವರು ನೀವು ಎಂದು ಅಶ್ವತ್ಥನಾರಾಯಣ ಛೇಡಿಸಿದರು. ಆಗಲೂ ಡಿ.ಕೆ.ಶಿವಕುಮಾರ್, ನಿಮ್ಮ ಪ್ರಧಾನಿಯೇ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದರು. ನಿಮ್ಮ ಬಳಿಯೇ ಪೆನ್ ಇತ್ತಲ್ಲ. ಆಗ ಯಾಕೆ ನೀವು ಅನುಮತಿ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದರು.