BengaluruPolitics

INDIA ಎಂಬ ವಿಪಕ್ಷಗಳ ಒಕ್ಕೂಟ ಅಸ್ತಿತ್ವಕ್ಕೆ; 11 ಜನರ ಸಮನ್ವಯ ಸಮಿತಿ ರಚನೆ

ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು 26 ಪಕ್ಷಗಳ ಒಕ್ಕೂಟ ರಚನೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಹಾಗೂ ಇಂದು ನಡೆದ ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಒಗ್ಗಟ್ಟಿನ ತೀರ್ಮಾನ ಮಾಡಿದ್ದಾರೆ. ಈ ಒಕ್ಕೂಟಕ್ಕೆ ಇಂಡಿಯನ್‌ ನ್ಯಾಷನಲ್‌ ಡೆವೆಲಪ್‌ಮೆಂಟಲ್‌ ಇನ್‌ಕ್ಲ್ಯೂಸಿವ್‌ ಅಲಯನ್ಸ್‌ (INDIA) ಎಂದು ಹೆಸರಿಡಲಾಗಿದೆ.

ಈ ಬಗ್ಗೆ ಎಲ್ಲಾ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ತಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮಹಾಮೈತ್ರಿ ಒಕ್ಕೂಟ INDIAದ ಸಮನ್ವಯತೆಗೆ 11 ಜನರ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಅದರಲ್ಲಿ ಯಾರ್ಯಾರಿದ್ದಾರೆ ಅನ್ನೋದನ್ನು ಮುಂಬೈನಲ್ಲಿ ನಡೆಯುವ ಸಭೆಯಲ್ಲಿ ತಿಳಿಸಲಾಗುವುದು ಎಂದು ಹೇಳಿದರು. ಮುಂದಿನ ಸಭೆ ಮುಂಬೈನಲ್ಲಿ ನಡೆಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಇನ್ನು ಒಕ್ಕೂಟದ ನಿರ್ವಹಣೆಗೆ ದೆಹಲಿಯಲ್ಲಿ ಕಚೇರಿ ಸ್ಥಾಪನೆ ಮಾಡಲಾಗುತ್ತದೆ ಎಂದು ಖರ್ಗೆ, ಭಾರತ ಸದ್ಯದ ಪರಿಸ್ಥಿತಿಯಲ್ಲಿ ಕ್ಲಿಷ್ಟಕರವಾಗಿದೆ. ದೇಶವನ್ನು ನಾವು ಕಾಪಾಡಬೇಕಾಗಿದೆ. ಅದಕ್ಕಾಗಿ ನಾವೆಲ್ಲಾ ಒಂದಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

 

Share Post