CrimeNational

ಸೂರತ್‌ನಲ್ಲಿ ಮತ್ತೊಂದು ಬೆಂಕಿ ಅನಾಹುತ; ಗಾರ್ಮೆಂಟ್ಸ್‌ ಫ್ಯಾಕ್ಟರಿ ಧಗಧಗ

ಸೂರತ್; ಸೂರತ್ ನಗರದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಬೆಂಕಿ ಅನಾಹುತ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಸೂರತ್ ನಗರದಲ್ಲಿ ದಿನದಿಂದ ದಿನಕ್ಕೆ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಇಂದು ನಗರದ ಸಾನಿಯಾ ಅಹಮದ್ ಗ್ರಾಮದಲ್ಲಿ ಶುಭಂ ಉದ್ಯೋಗ್ ಪ್ರದೇಶದಲ್ಲಿನ ಹಲವಾರು ಜವಳಿ ಕಾರ್ಖಾನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೋಲಾಹಲ ಉಂಟಾಯಿತು. ಘಟನೆಯ ಮಾಹಿತಿ ತಿಳಿದ ಅಗ್ನಿಶಾಮಕ ದಳದ 8ಕ್ಕೂ ಹೆಚ್ಚು ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸತತ 2 ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.

ಅಗ್ನಿಶಾಮಕ ಅಧಿಕಾರಿ ದಿನು ಪಟೇಲ್ ಮಾತನಾಡಿ, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಬೆಳಗ್ಗೆ 5:18 ಕ್ಕೆ ಕರೆ ಬಂದಿತ್ತು. ಕರೆ ಬಂದ ತಕ್ಷಣ ನಾವು 4 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದೆವು. ಬೆಂಕಿಯ ಪ್ರಮಾಣ ಬಹಳ ದೊಡ್ಡದಾಗಿದ್ದರಿಂದ ಎರಡು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು.

Share Post