ನಂದಿನಿ ಹಾಲು 5 ರೂ. ಹೆಚ್ಚಳ ಸಾಧ್ಯತೆ; ಮತ್ತೊಂದು ಬರೆ ಎಳೆಯುತ್ತಾ ಸರ್ಕಾರ..?
ಬೆಂಗಳೂರು; ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ವಿದ್ಯುತ್ ಬೆಲೆ ಏರಿಕೆ ಮಾಡಿತ್ತು. ಇದೀಗ ಹಾಲು, ಮೊಸರು, ಮಜ್ಜಿಗೆ ಬೆಲೆಯೂ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ನೂತನ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭೀಮಾ ನಾಯ್ಕ್, ರಾಜ್ಯ ಎಲ್ಲಾ ಹಾಲಿನ ಯೂನಿಯನ್‌ಗಳು ದರ ಏರಿಕೆಗೆ ಬೇಡಿಕೆ ಇಟ್ಟಿವೆ. ಹೀಗಾಗಿ ನಂದಿನಿ ಹಾಲು ಲೀಟರ್‌ಗೆ ಐದು ರೂಪಾಯಿ ಏರಿಸಲು ನಾವು ಬೇಡಿಕೆ ಇಟ್ಟಿದ್ದೇವೆ. ಸಿಎಂ ಸಿದ್ದರಾಮಯ್ಯ ಮುಂದೆ ಬೇಡಿಕೆ ಇಟ್ಟಿದ್ದೇವೆ. ದರ ಹೆಚ್ಚಳದ ಬಗ್ಗೆ ಸಿಎಂ ಯಾವ ನಿರ್ಧಾರ ತೆಗೆದುಕೊಳ್ತಾರೋ ನೋಡಬೇಕು ಎಂದು ಅವರು ಹೇಳಿದ್ದಾರೆ.