ಎದುರು ಬಂದ ಸಚಿವ ಎಂ.ಬಿ.ಪಾಟೀಲ್; ಗುರಾಯಿಸಿದ ಸಂಸದ ಡಿ.ಕೆ.ಸುರೇಶ್
ಬೆಂಗಳೂರು; ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎಂದಿದ್ದ ಸಚಿವ ಎಂ.ಬಿ.ಪಾಟೀಲರನ್ನು ನೋಡಿ ಸಂಸದ ಡಿ.ಕೆ.ಸುರೇಶ್ ಗುರಾಯಿಸಿದ್ದಾರೆ. ನಿನ್ನೆಯೇ ಎಂ.ಬಿ.ಪಾಟೀಲರಿಗೆ ಡಿ.ಕೆ.ಸುರೇಶ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇದೀಗ ವಿಧಾನಸೌಧದ ಸಮ್ಮೇಳನ ಸಭಾಂಗಣದ ಬಾಗಿಲಿನ ಬಳಿ ಇಬ್ಬರು ಎದುರಾಗಿದ್ದಾರೆ. ಈ ಸಂಸದ ಡಿ.ಕೆ.ಸುರೇಶ್ ಅವರು ಎಂ.ಬಿ.ಪಾಟೀಲರನ್ನು ಗುರಾಯಿಸಿದ್ದಾರೆ. ಸಾಲದದೆಂಬಂತೆ ವಾರ್ನಿಂಗ್ ಕೂಡಾ ಕೊಟ್ಟಿದ್ದಾರೆ.
ಸ್ವಲ್ಪ ಮಾತು ಬಿಗಿಯಾಗಿರಲಿ ಅಂತ ಡಿ.ಕೆ.ಸುರೇಶ್ ಇದೇ ವೇಳೆ ಹೇಳಿದ್ದಾರೆ. ಇದರಿಂದ ಎಂ.ಬಿ.ಪಾಟೀಲರು ಸೇರಿ ಅಲ್ಲಿದ್ದವರು ಸ್ವಲ್ಪ ಗಲಿಬಿಲಿಗೊಂಡಿದ್ದಾರೆ. ಇನ್ನು ಇದೇ ವೇಳೆ ಎಂ.ಬಿ.ಪಾಟೀಲರು ಬನ್ನಿ ಚೇಂಬರ್ಗೆ ಹೋಗೋಣ ಎಂದು ಡಿ.ಕೆ.ಸುರೇಶ್ರನ್ನು ಕರೆದಿದ್ದಾರೆ. ಆಗಲೂ ಡಿ.ಕೆ.ಸುರೇಶ್ ಗುರಾಯಿಸಿದ್ದಾರೆ. ಇದರಿಂದಾಗಿ ಎಂ.ಬಿ.ಪಾಟೀಲರು ಆಮೇಲೆ ಮಾತನಾಡುತ್ತೇನೆ ಎಂದು ಅಲ್ಲಿಂದ ಹೊರಟುಹೋಗಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಅವರ ಈ ವರ್ತನೆಗೆ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಏನ್ರಿ ಇದು ರೌಡಿಯಿಸಂ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದೂ ತಿಳಿದುಬಂದಿದೆ.