NationalPolitics

ಎಐಎಡಿಎಂಕೆ ಪಕ್ಷದಿಂದ ಮಾಜಿ ಸಿಎಂ ಒ.ಪನ್ನೀರ್‌ ಸೆಲ್ವಂ ಉಚ್ಚಾಟನೆ

ಚೆನ್ನೈ; ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಅವರನ್ನು ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ. ಎಐಎಡಿಎಂಕೆ ಪಕ್ಷದ ಎ. ಪಳನಿ ಸ್ವಾಮಿ ನೇತೃತ್ವದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಸಭೆ ನಡೆಸಬಾರದು ಎಂದು ಪನ್ನೀರ್‌ ಸೆಲ್ವಂ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಆದ್ರೆ ಇದನ್ನು ಮದ್ರಾಸ್ ಹೈಕೋರ್ಟ್‌ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ, ನಡೆದ ಸಾಮಾನ್ಯ ಸಭೆಯಲ್ಲಿ ಎ. ಪಳನಿ ಸ್ವಾಮಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಜೊತೆಗೆ ಪಕ್ಷದಲ್ಲಿ ಏಕ ನಾಯಕತ್ವದ ನಿರ್ಣಯ ಅಂಗೀಕರಿಸಲಾಗಿತ್ತು.

ಇನ್ನು ಈ ನಿರ್ಧಾರದ ವೇಳೆ ಪನ್ನೀರ್‌ ಸೆಲ್ವಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪಕ್ಷದ ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನಡೆದ ಸಭೆಯಲ್ಲಿ ಪನ್ನೀರ್ ಸೆಲ್ವಂ ಅವರನ್ನು ಉಚ್ಚಾಟಿಸಲಾಗಿದೆ. ಪನ್ನೀರ್ ಬಣದಲ್ಲಿ ಕಾಣಿಸಿಕೊಂಡಿದ್ದ ಆರ್. ವೈತಿಲಿಗಂ, ಜೆಸಿಡಿ ಪ್ರಭಾಕರ್ ಮತ್ತು ಪಿ.ಎಚ್. ಮನೀಜ್ ಪಾಂಡ್ಯನ್ನ ಅವರನ್ನೂ ಉಚ್ಚಾಟಿಸಲಾಗಿದೆ. ಒ.ಪನ್ನೀರ್‌ ಸೆಲ್ವಂ ಮಗ ಸಂಸದ ಪಿ. ರವೀಂದ್ರನಾಥ್ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಿಳಿದುಬಂದಿದೆ.

 

Share Post