Bengaluru

ಮಗಳ ಮದುವೆಯಲ್ಲಿ ಶಾಸಕ ಫುಲ್‌ ಜೋಷ್‌; ಕುಣಿದು ಕುಪ್ಪಳಿಸಿದ ತನ್ವೀರ್‌ ಸೇಠ್‌

ಬೆಂಗಳೂರು; ಮೈಸೂರಿನ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ತಮ್ಮ ಮಗಳ ಮದುವೆಯಲ್ಲಿ ಹಾಡಿಗೆ ಸ್ಟೆಪ್ಸ್‌ ಹಾಕಿ ಗಮನ ಸೆಳೆದಿದ್ದಾರೆ. ಶಾಸಕ ತನ್ವೀರ್‌ ಸೇಠ್‌ ಅವರ ಮಗಳ ವಿವಾಹ ಬೆಂಗಳೂರಿನ ಅರಮನೆ ಮೈದಾನದ ವೈಟ್‌ ಪೆಟಲ್ಸ್‌ನಲ್ಲಿ ನೆರವೇರಿತು. ಅದೂರಿಯಾಗಿ ನಡೆದ ಮದುವೆ ರಿಸೆಪ್ಷನ್‌ನಲ್ಲಿ ತನ್ವೀರ್‌ ಸೇಠ್‌ ಕುಣಿದು ಕುಪ್ಪಳಿಸಿದ್ದಾರೆ.

 

ಕಳೆದ ರಾತ್ರಿ ನಡೆದ ಮದುವೆ ರಿಸೆಪ್ಷನ್‌ನಲ್ಲಿ ತನ್ವೀರ್‌ ಸೇಠ್‌ ತಮ್ಮ ಮಗಳು ಹಾಗೂ ಅಳಿಯನ ಜೊತೆ ಹಾಡೊಂದನ್ನು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

 

 

Share Post