Bengaluru

MEKEDATU PADAYATRA: ಕೊವಿಡ್‌ ಮಾರ್ಗಸೂಚಿ ಉಲ್ಲಂಘನೆ; ಡಿಕೆಶಿ ಸೇರಿ 38 ಮಂದಿ ವಿರುದ್ಧ ಎಫ್‌ಐಆರ್‌

ರಾಮನಗರ: ಮೇಕೆದಾಟು ಪಾದಯಾತ್ರೆ ಬೆಂಗಳೂರಿನತ್ತ ಹೊರಟಿದೆ. ಮೊದಲ ಹಂತದ ಮೇಕೆದಾಟು ಹೋರಾಟದ ವೇಳೆ ಸರ್ಕಾರ ಹೋರಾಟಗಾರರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಕೊವಿಡ್‌ ಮಾರ್ಗಸೂಚಿ ಉಲ್ಲಂಘನೆ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಂಆರ್‌ ಸೇರಿ 38 ಮುಖಂಡರ ವಿರುದ್ಧ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಪ್ರಕರಣದಲ್ಲಿ‌ ಮೊದಲ ಆರೋಪಿಯಾಗಿಸಲಾಗಿದೆ. ನಂತರದಲ್ಲಿ‌ ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ, ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಸಲೀಂ ಅಹಮ್ಮದ್, ಮೊಹಮ್ಮದ್ ನಲಪ್ಪಾಡ್ ಹ್ಯಾರಿಸ್, ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಎಂ.ಬಿ.‌ ಪಾಟೀಲ, ಯು.ಟಿ. ಖಾದರ್, ಕೆ.ಎಚ್. ಮುನಿಯಪ್ಪ , ಚಿತ್ರ ನಟರಾದ ಸಾಧುಕೋಕಿಲ, ನೆನಪಿರಲಿ ಪ್ರೇಮ್ ಮತ್ತಿತರರ ವಿರುದ್ಧ ರಾಮನಗರದ ಐಜೂರು ಠಾಣೆ ಪೊಲೀಸರು FIR ದಾಖಲಿಸಿದ್ದಾರೆ.

Share Post