BengaluruCrime

ಲಿಫ್ಟ್‌ಗೆಂದು ತೋಡಿದ್ದ ಗುಂಡಿಗೆ ಬಿದ್ದು ಬಾಲಕ ದುರ್ಮರಣ!

ಬೆಂಗಳೂರು; ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ಗೆಂದು ತೋಡಲಾಗಿದ್ದ ಗುಂಡಿಯಲ್ಲಿ ಬಿದ್ದು ಏಳು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.. ಬೆಂಗಳೂರಿನ ಕಾಡುಗೋಡಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಏಳು ವರ್ಷದ ಸುಹಾಸ್‌ ಗೌಡ ಎಂಬ ಬಾಲಕ ಸಾವನ್ನಪ್ಪಿದ್ದಾನೆ..
ಹಾಲಿನ ಡೇರಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದಕ್ಕಾಗಿ ಲಿಫ್ಟ್‌ಗೆ ಗುಂಡಿ ತೋಡಲಾಗಿತ್ತು.. ಆ ಗುಂಡಿಯಲ್ಲಿ ಮಳೆ ನೀರು ತುಂಬಿತ್ತು.. ಅದಕ್ಕೆ ಬಿದ್ದ ಬಾಲಕ ಬಿದ್ದು ಸಾವನ್ನಪ್ಪಿದ್ದಾನೆ.. ಈ ಹಿನ್ನೆಲೆಯಲ್ಲಿ ಹಾಲು ಡೇರಿ ಅಧ್ಯಕ್ಷ ಸೊಣ್ಣಪ್ಪ ಹಾಗೂ ಕಾರ್ಯದರ್ಶಿ ಸುನೀಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ..
ಬಾಲಕ ಸುಹಾಸ್‌ ಗೌಡ ಆಟವಾಡುವಾಗ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದಾನೆ.. ಸುಹಾಸ್‌ ಗೌಡ ಎಂಬ ಮೃತ ಬಾಲಕ ಶ್ರೀಕನ್ಯಾ ಹಾಗೂ ಮುನಿರಾಜು ದಂಪತಿಯ ಮಗ ಎಂದು ಗೊತ್ತಾಗಿದೆ.. ಕನ್ನಮಂಗಲದಲ್ಲಿ ನಿರ್ಮಾಣ ಹಂತದ ಡೇರಿ ಕಟ್ಟಡವಿದ್ದು, ಇತ್ತೀಚೆಗೆ ಇದಕ್ಕೆ ಲಿಫ್ಟ್‌ ಹಾಕಿಸುವುದಕ್ಕಾಗಿ ಗುಂಡಿ ತೋಡಲಾಗಿತ್ತು.. ಆದ್ರೆ ಕೆಲ ದಿನಗಳಿಂದ ಮಳೆಯಾಗುತ್ತಿರುವುದರಿಂದ ಅದರಲ್ಲಿ ನೀರು ತುಂಬಿತ್ತು.. ಬಾಲಕ ಆಟವಾಡುವಾಗ ಗೊತ್ತಾಗದೇ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ..

Share Post