ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಈಗ ರಾಜಸ್ಥಾನದಲ್ಲಿ ಶಾಸಕ!
ಬೆಂಗಳೂರು; ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಈಗ ರಾಜಸ್ಥಾನದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಲಾಡುಲಾಲ ಪಿಟ್ಲಿಯಾ ಎಂಬುವವರೇ ಶಾಸಕರಾಗಿ ಆಯ್ಕೆಯಾಗಿರುವ ಬಟ್ಟೆ ವ್ಯಾಪಾರಿ. ಇವರು ರಾಜಸ್ಥಾನದ ಸಹಾರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯಶಾಲಿಯಾಗಿದ್ದಾರೆ.
ಲಾಡುಲಾಲ ಪಿಟ್ಲಿಯಾ ಅವರು, 1.17 ಲಕ್ಷ ಮತ ಗಳಿಸಿ ಜಯಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ತ್ರಿವೇದಿ 54,684 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಗಿದ್ದಾರೆ.