Bengaluru

ಪೀಣ್ಯ ಫ್ಲೈಓವರ್‌ : ಇಂದು ಸಂಜೆಯಿಂದ ಲಘು ವಾಹನ ಓಡಾಟಕ್ಕೆ ಅವಕಾಶ

ಬೆಂಗಳೂರು : ನಗರದ ಪೀಣ್ಯ ಫ್ಲೈಓವರ್‌ ಮೇಲೆ ವಾಹನಗಳ ಸಂಚಾರವನ್ನು ರದ್ದು ಮಾಡಲಾಗಿತ್ತು. ಡಿಸೆಂಬರ್‌ 24ರಂದು ಒಂದು ವಾರದ ಕಾಮಗಾರಿ ಎಂದು ಈ ಫ್ಲೈಓವರ್‌ ಅನ್ನು ಮುಚ್ಚಲಾಗಿತ್ತು. 50ಕ್ಕೂ ಹೆಚ್ಚು ದಿನಗಳ ನಂತರ ಮತ್ತೆ ಫ್ಲೈಓವರ್‌ ಅನ್ನು ಮತ್ತೆ ತೆರೆಯಲಾಗುತ್ತಿದೆ.

ಇಂದು ಸಂಜೆಯಿಂದ ಲಘುವಾಹನಗಳು ಈ ಫ್ಲೈಓವರ್‌ ಅನ್ನು ಬಳಸಬಹುದಾಗಿದೆ. ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮುಚ್ಚಿದಾಗಿನಿಂದಲೂ ಪೀಣ್ಯ, ಜಾಲಹಳ್ಳಿ ಕ್ರಾಸ್‌, ದಾಸರಹಳ್ಳಿ, ಎಂಟನೇ ಮೈಲಿಯಲ್ಲಿ ವಾಹನ ದಟ್ಟನೆ ಹೆಚ್ಚಾಗಿತ್ತು.

ಈಗ ಕೇವಲ ಬೈಕ್‌, ಆಟೋ ಸೇರಿದಂತೆ ಲಘುವಾಹನಗಳಿಗಷ್ಟೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಿದೆ.

ಲೋಡ್‌ ಟೆಸ್ಟ್‌ನಲ್ಲಿ ಫ್ಲೈಓವರ್‌ ಸೇಫ್‌ ಅಲ್ಲ ಎಂಬುದು ತಿಳಿದುಬಂದಿದೆ. ಈ ಕುರಿತು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಹೊಸ ಫ್ಲೈಓವರ್‌ಗೆ ಅನುಮತಿ ಕೋರಿ ರಾಷ್ಟ್ರೀಯ ಹೆದ್ದಾರಿ ಸಚಿವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ.  ವಾಹನ ಸಂಚಾರಕ್ಕೆ ಅನುಮತಿ ನೀಡಿದರೆ ಫ್ಲೈಓವರ್‌ ಬಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಯಾವುದೇ ಕಾರಣಕ್ಕೂ ಭಾರಿ ವಾಹನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ.

ಇನ್ನು ಈ ಫ್ಲೈಓವರ್‌ ಯಾರ ಕಾಲದಲ್ಲಿ ಆಗಿದೆ ಮತ್ತು ಯಾರು ಇದನ್ನು ಮಾಡಿದ್ದರು ಎಂಬ ಸಂಪೂರ್ಣ ಮಾಹಿತಿಯನ್ನು ಕಲೆಹಾಕಲಿದ್ದೇವೆ. ಇದು ಕಳಪೆ ಕಾಮಗಾರಿಯಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Share Post