Bengaluru

ರಾತ್ರಿಯಿಡೀ ಸುರಿಯಿತು ಮಳೆ; ಇನ್ನೂ ಎರಡು ದಿನ ವರುಣನ ಅಬ್ಬರ!

ಬೆಂಗಳೂರು; ಬೆಂಗಳೂರು ಸೇರಿದಂತೆ ರಾಜ್ಯ ಹಲವೆಡೆ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ಇದರಿಂದಾಗಿ ಬೆಂಗಳೂರಿನ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಎರಡು ದಿನ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್  ಘೋಷಣೆ ಮಾಡಲಾಗಿದೆ. ಈ ಆರು ಜಿಲ್ಲೆಗಳಲ್ಲಿ ಇವತ್ತು ಹಾಗೂ ನಾಳೆ ಭರ್ಜರಿ ಮಳೆಯಾಗಲಿದೆ. 

ಇನ್ನು ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಹಲವೆಡೆ ಮನೆಗಳು ಹಾಗೂ ಕಟ್ಟಡಗಳಿಗೆ ನೀರು ನುಗ್ಗಿದೆ.  ಬೆಂಗಳೂರು ಪೂರ್ವ ವಲಯ, ಮಹದೇವಪುರ ವಲಯ, ಬೆಂಗಳೂರು ದಕ್ಷಿಣದ ಹಲವು ಭಾಗಗಳಲ್ಲಿ ಮರಗಳು ಉರುಳಿಬಿದ್ದಿದ್ದರಿಂದ ಅವಾಂತರ ಸೃಷ್ಟಿಯಾಗಿದೆ. ಜಕ್ಕೂರ್, ಹಂಪಿನಗರ, ನಾಗಪುರ, ನಂದಿನಿ ಲೇಔಟ್, ವಿಶ್ವನಾಥ್ ನಾಗೇನಹಳ್ಳಿ, ರಾಜಮಹಲ್ ಗುಟ್ಟಹಳ್ಳಿ, ಗಾಳಿ ಆಂಜನೇಯ ದೇವಸ್ಥಾನ ಬಳಿ, ಕೊಟ್ಟಿಗೆಪಾಳ್ಯ, ಅಗ್ರಹಾರ ದಾಸರಹಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ.

 

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ.. ?

=================
ಯಲಹಂಕ – 14.7 ಸೆಂ.ಮೀ
ಹಂಪಿನಗರ – 9.4 ಸೆಂ.ಮೀ
ನಾಗಪುರ (ವೆಸ್ಟ್ ಜೋನ್) – 8.95 ಸೆಂ.ಮೀ
ಜಕ್ಕೂರು – 8.65 ಸೆಂ.ಮೀ
ನಂದಿನಿ ಲೇಔಟ್ – 8.55 ಸೆಂ.ಮೀ
ವಿಶ್ವನಾಥ್ ನಾಗೇನಹಳ್ಳಿ (ಈಸ್ಡ್ ಜೋನ್) – 7.5 ಸೆಂ.ಮೀ
ರಾಜ್ ಮಹಲ್ ಗುಟ್ಟಳ್ಳಿ – 7.6 ಸೆಂ.ಮೀ
ಗಾಳಿ ಆಂಜನೇಯ ಟೆಂಪಲ್ – 7.5 ಸೆಂ.ಮೀ
ಕೊಟ್ಟಿಗೆಪಾಳ್ಯ – 7 ಸೆಂ.ಮೀ
ಕಮ್ಮನಹಳ್ಳಿ (ಈಸ್ಟ್ ಜೋನ್)- 6.95 ಸೆಂ.ಮೀ
ಮಾರುತಿ ಮಂದಿರ ವಾರ್ಡ್ – 6.8 ಸೆಂ.ಮೀ
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ -6.75 ಸೆಂ.ಮೀ
ಅಗ್ರಹಾರ ದಾಸರಹಳ್ಳಿ – 6.7 ಸೆಂ.ಮೀ

Share Post