Bengaluru

ಸಿಎಂ ಭೇಟಿಯಾದ ಇಸ್ರೇಲ್‌ ರಾಯಭಾರಿ ಶ್ರೀ ನವೊರ್ ಗಿಲಾನ್-ದ್ವಿಪಕ್ಷೀಯ ಸಂಬಂಧ ಬಲಪಡಿಸಲು ಅಡಿಪಾಯ

ಬೆಂಗಳೂರು: ಇಸ್ರೇಲ್ ರಾಯಭಾರಿ ಶ್ರೀ ನವೊರ್ ಗಿಲಾನ್ ಮತ್ತು ದಕ್ಷಿಣ ಭಾರತದಲ್ಲಿ ಇಸ್ರೇಲ್ ನ ಕಾನ್ಸಲ್ ಜನರಲ್ ಜೊನಾಥನ್ ಝಡ್ಕಾ ಅವರ ನೇತೃತ್ವದ ಇಸ್ರೇಲಿ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ರು.

2022ಕ್ಕೆ ಭಾರತ ಮತ್ತು ಇಸ್ರೇಲ್‌ ದೇಶಗಳ ರಾಜತಾಂತ್ರಿಕ ಬಾಂಧವ್ಯಕ್ಕೆ 30 ವರ್ಷಗಳು ಪೂರ್ಣವಾಗಿವೆ. ಈ ಹಿನ್ನೆಲೆ ಇಸ್ರೇಲ್‌ ಪ್ರಧಾನ ಮಂತ್ರಿ ನಫ್ತಾಲಿ ಬೆನ್ನೆಟ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು  ಇಸ್ರೇಲ್‌ ತಂಡ ಭಾರತಕ್ಕೆ ಬಂದಿದೆ.

ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರನ್ನು ಇಸ್ರೇಲ್ ರಾಯಭಾರಿ ಶ್ರೀ ನವೊರ್ ಗಿಲಾನ್ ಮತ್ತು ದಕ್ಷಿಣ ಭಾರತದಲ್ಲಿ ಇಸ್ರೇಲ್ ನ ಕಾನ್ಸಲ್ ಜನರಲ್ ಜೊನಾಥನ್ ಝಡ್ಕಾ ಅವರ ನೇತೃತ್ವದ ಇಸ್ರೇಲಿ ನಿಯೋಗ  ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿತು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Share Post