BengaluruDistricts

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಳ; ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ

ಬೆಂಗಳೂರು; ಮುಂಗಾರು ಪ್ರವೇಶ ಲೇಟಾಗಿದ್ದರಿಂದಾಗಿ ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಕಡಿಮೆ ಆತಂಕಕ್ಕೆ ಕಾರಣವಾಗಿತ್ತು. ಕುಡಿಯೋ ನೀರಿಗೂ ತೊಂದರೆಯಾಗಬಹುದೆಂಬ ಭೀತಿ ಉಂಟಾಗಿತ್ತು. ಆದ್ರೆ ಕೆಲ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಳ್ಳೆ ಮಳೆಯಾಗುತ್ತಿದೆ. ಹೀಗಾಗಿ ಕೆಆರ್‌ಎಸ್‌ ಡ್ಯಾಂಗೆ ನೀರಿನ ಒಳಹರಿವು ಕೂಡಾ ಜಾಸ್ತಿಯಾಗಿದೆ. ಜಲಾಶಯದಲ್ಲಿ ಒಂದೇ ದಿನ ಒಂದು ಟಿಎಂಸಿ ನೀರು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ದಿನ ಉತ್ತಮ ಮಳೆಯಾಗಿದ್ದರಿಂದ ಕೆಆರ್‌ಎಸ್‌ ಜಲಾಶಯದ ಒಳಹರಿವು 13,449 ಕ್ಯೂಸೆಕ್ ಆಗಿದೆ. ಈ ವರ್ಷದಲ್ಲಿ ಇದೇ ಅತಿಹೆಚ್ಚು ಒಳಹರಿವಾಗಿದ್ದು, ಒಳ ಹರಿವಿನ ಪ್ರಮಾಣ 13,499 ಕ್ಯೂಸೆಕ್ ಇದ್ದು, ಡ್ಯಾಂ ಹೊರಹರಿವು 353 ಕ್ಯೂಸೆಕ್ ಆಗಿದೆ.

Share Post