BengaluruCrime

ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅನಾಹುತ; ಕ್ರೇನ್‌ ರಸ್ತೆಗೆ ಪಲ್ಟಿ

ಬೆಂಗಳೂರು; ಮೆಟ್ರೋ ಕಾಮಗಾರಿ ವೇಳೆ ಈಗಾಗಲೇ ಹಲವು ಅನಾಹುತಗಳು ನಡೆದಿವೆ. ಮೆಟ್ರೋ ಪಿಲ್ಲರ್‌ ದುರಂತಕ್ಕೆ ಕೆಲ ತಿಂಗಳ ಹಿಂದೆ ತಾಯಿ-ಮಗು ಸಾವನ್ನಪ್ಪಿದ್ದರು. ಇದೀಗ ಮತ್ತೊಂದು ಅನಾಹುತ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಬಳಿ ಮೆಟ್ರೋ ಪಿಲ್ಲರ್‌ ಅಳವಡಿಕೆ ಕಾಮಗಾರಿ ನಡೆಯುತ್ತಿತ್ತು. ಅದಕ್ಕಾಗಿ ಮಣ್ಣು ತೆಗೆಯಲಾಗುತ್ತಿದೆ. ಕ್ರೇನ್‌ ಒಂದು ಮಣ್ಣನ್ನು ಹೊರತೆಗೆಯುತ್ತಿತ್ತು. ಈ ವೇಳೆ ಓವರ್‌ ಲೋಡ್‌ ಆಗಿ ಕ್ರೇನ್‌ ರಸ್ತೆಗೆ ಉರುಳಿಬಿದ್ದಿದೆ. ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪಕ್ಕದಲ್ಲಿದ್ದ ರಾಜಕಾಲುವೆ ತಡೆಗೋಡೆ ಕ್ರೇನ್‌ ಅಂಟಿಕೊಂಡು ನಿಂತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಇದರಿಂದಾಗಿ ವಾಹನ ಸವಾರರು ಬಚಾವ್‌ ಆಗಿದ್ದಾರೆ.

ಕಾಮಗಾರಿ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿಯಿಂದ ಮಡಿವಾಳ ಕಡೆ ಬರುವ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಆದ್ರೆ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

Share Post