ವಿವೇಕಾನಂದ ಯಾರೋ ನನಗೇ ಗೊತ್ತೇ ಇಲ್ಲ; ವಿಡಿಯೋಗೆ ಸ್ಪಷ್ಟನೆ ಕೊಟ್ಟ ಯತೀಂದ್ರ
ಮೈಸೂರು; ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿತ್ತು. ಆದ್ರೆ ಯತೀಂದ್ರ ಈ ಬಗ್ಗೆ ಏನೂ ಮಾತಾಡಿರಲಿಲ್ಲ. ಇದೀಗ ಅವರು ಮೈಸೂರಿನ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಸಿಎಂ ಜೊತೆ ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತಿರುತ್ತೇನೆ. ಅಂದು ನಾನು ಮಾತನಾಡಿರೋದು ಸಿಎಸ್‌ಆರ್ ಫಂಡ್‌ನ ಬಗ್ಗೆ. ನಾನು ಎಲ್ಲೂ ಕೂಡಾ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿಲ್ಲ. ಹೀಗಾಗಿ, ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆಯೇ ಇಲ್ಲ ಎಂದಿದ್ದಾರೆ.
ಇನ್ನೊಂದು ವಿವೇಕಾನಂದ ಹೆಸರು ಪ್ರಸ್ತಾಪವಾಗಿರುವುದು, ಇದೀಗ ವಿವೇಕಾಂದ ಎಂಬ ಇನ್ಸ್‌ಪೆಕ್ಟರ್ ವರ್ಗಾವಣೆಯಾಗಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯತೀಂದ್ರ, ವಿವೇಕಾನಂದ ಯಾರು ಅಂತಾನೇ ನನಗೆ ಗೊತ್ತಿಲ್ಲ. ಅವರ ವರ್ಗಾವಣೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.