ಮಕ್ಕಳಲ್ಲಿ ಮತೀಯ ಸಂಘರ್ಷವನ್ನು ಬಿತ್ತಬೇಡಿ: ಕಾಂಗ್ರೆಸ್‌ಗೆ ಗೃಹ ಸಚಿವ ಮನವಿ
ಬೆಂಗಳೂರು: ಉಡುಪಿ-ಕುಂದಾಪುರ, ಬೆಳಗಾವಿ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಗಿಲು ಮುಟ್ಟುತ್ತಿದೆ. ಈ ವಿವಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್-ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪ ಶುರು ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸಮವಸ್ತ್ರ ಸಮಾನತೆಯ ಸಂಕೇತ. ಒಂದು ಕುಟುಂಬದಲ್ಲಿ ಬದುಕುವ ಹಾಗೆ ಇರಲೆಂದು ಯೂನಿಫಾರ್ಮ್ ತಂದಿದ್ದೇವೆ. ಕಾಂಗ್ರೆಸ್‌ನವರಿಗೆ ಇದ್ದಕ್ಕಿಂದತೆ ಮೂಲಭೂತ ಹಕ್ಕು ನೆನಪಿಗೆ ಬರುತ್ತೆ. ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದಾರೆ ಎಂದು ಗೃಹ ಸಚಿವ ಕಿಡಿ ಕಾರಿದ್ದಾರೆ.
ಶಾಲಾ ಆಡಳಿತ ಮಂಡಳಿ ನಿರ್ಧಾರದ ಮೇರೆಗೆ ಸಮವಸ್ತ್ರ ಧರಿಸಬೇಕು ಎಂದಿದ್ದಾರೆ. ಒಂದೊಂದು ಧರ್ಮದಲ್ಲಿ ಒಂದೊಂದು ಬಟ್ಟೆ ಇದೆ. ಶಾಲೆಯಿಂದ ಹೊರಗಡೆ ಯಾವುದಾದ್ರೂ ಬಟ್ಟೆ ಹಾಕಲಿ, ಶಾಲೆ ಸಂಸ್ಕಾರ ಕಲಿಸಿ ಕೇಂದ್ರಗಳು, ಅಲ್ಲಿ ಧರ್ಮ ಹೇಳಿದಂತೆ ನಡೆದುಕೊಳ್ತೀವಿ ಅಂದ್ರೆ ಹೇಗೆ..? ಇತ್ತೀಚೆಗೆ ಮತ್ತೀಯ ಸಂಘಟನೆಗಳು ಎತ್ತಿಕಟ್ಟಿರುವುದರಿಂದ ಮಕ್ಕಳು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ಮೊದಲು ಯಾರೂ ಹಿಜಾಬ್ ಧರಿಸುತ್ತಿರಲಿಲ್ಲ. ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಬೇಡ, ಹಿಜಾಬ್ ಬೇಡ, ಶಾಲಾ ಆಡಳಿತ ಮಂಡಳಿ ನಿರ್ಧಾರ ಮಾಡುವ ಬಟ್ಟೆ ಧರಿಸಲಿ, ಮಕ್ಕಳು ಹೇಳಿದಂತೆ ಕೇಳಿದ್ರೆ ನಾಳೆ ಈ ಪಾಠ ನಾವು ಕೇಳಲ್ಲ ಅಂತಾರೆ ಆಗ ಏನ್ ಮಾಡೋದು ಎಂದಿದ್ದಾರೆ.
ಕಾಂಗ್ರೆಸ್‌ನವರು ಈ ದೇಶವನ್ನು ಒಡೆದು ಭಾಗ ಮಾಡಿದ್ದಾರೆ, ವೋಟ್ ಬ್ಯಾಂಕ್ ಮಾಡಿದ್ದು ಗೊತ್ತೇ ಇದೆ. ವಿದ್ಯಾರ್ಥಿಗಳ ಪುಂಡಾಟವನ್ನು ತಪ್ಪಿಸಲು ಸಮವಸ್ತ್ರ ನೀಡಲಾಗಿದೆ. ಯೂನಿಫಾರ್ಮ್ ಹಾಕಿದ್ರೆ ಯಾರು ಯಾವ ಶಾಲೆ ವಿದ್ಯಾರ್ಥಿ ಎಂಬುದನ್ನು ಕಂಡುಹಿಡಿದು ಬುದ್ಧಿವಾದ ಹೇಳಬಹುದು. ಯೂನಿಫಾರ್ಮ್ ಅಂದ್ರೆ ಧಾರ್ಮಿಕತೆಯ ಬಟ್ಟೆ ಅಲ್ಲ..ಕಾಂಗ್ರೆಸ್ ಸೋದರರಿಗೆ ಮನವಿ ಮಾಡ್ತಿದ್ದೇನೆ. ಮತೀಯ ಸಂಘರ್ಷವನ್ನು ಮಕ್ಕಳಲ್ಲಿ ಬಿತ್ತಬೇಡಿ ಎಂದಿದ್ದಾರೆ.