ಶಿಕ್ಷಣ ಬೇಕಾದ್ರೆ ಅಲ್ಲಿನ ನಿಯಮವನ್ನು ಪಾಲನೆ ಮಾಡಲೇಬೇಕು: ಬಿ.ಸಿ.ನಾಗೇಶ್
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್, ಸಮವಸ್ತ್ರ ಗಲಾಟೆ ತಾರಕಕ್ಕೇರಿದೆ. ಈ ವಿವಾರವಾಗಿ ಪ್ರತಿಕ್ರಿಯಿಸಿದೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅರ್ಜಿ ನ್ಯಾಯಾಲಯದಲ್ಲಿದೆ. ಕೋರ್ಟ್‌ನಿಂದ ತೀರ್ಪು ಬರುವವರೆಗೂ ಸದ್ಯದ ಪರಿಸ್ಥಿತಿಯೇ ಮುಂದುವರೆಯಲಿದೆ ಎಂದಿದ್ದಾರೆ.
ಹಿಜಾಬ್ ಪರವಾಗಿ ಮಾತನಾಡಿರುವ ಸಿದ್ದರಾಮಯ್ಯನವರಿಗೆ ನಾಚಿಕೆ ಆಗ್ಬೇಕು. ಅವರೂ ಸಿಎಂ ಆಗಿದ್ದವರು, ಒಂದು ಉನ್ನತ ಸ್ಥಾನದಲ್ಲಿರವವರು ಹೀಗೆ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ. ವೋಟಿಗಾಗಿ ಒಂದು ಸಮುದಾಯವನ್ನು ಮೆಚ್ಚಿಸಲು ಹೀಗೆಲ್ಲಾ ವಿಷಬೀಜ ಬಿತ್ತಬಾರದು. ಈ ಘಟನೆ ಹಿಂದೆ ಯಾವುದೇ ಕಾಣದ ಕೈವಾಡವಿದೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಬರೀ ರಾಜಕೀಯ ಮಾಡಲು ಹುಟ್ಟಿಕೊಂಡಿವೆ. ವೋಟಿಗಾಗಿ ಏನು ಬೇಕಾದ್ರೂ ಮಾತಾಡ್ತಾರೆ. ಸ್ವಾತಂತ್ರಯ ಬಂದಾಗಿನಿಂದ ಸರಿಯಾದ ದಾರಿಯಲ್ಲಿ ನಡೆದಿದ್ರೆ ದೇಶದ ಪರಿಸ್ಥಿತಿ ಹೀಗೆ ಆಗುತ್ತಿರಲಿಲ್ಲ ಎಂದು ಕಿಡಿ ಕಾರಿದ್ರು.
ಶಾಲಾ-ಕಾಲೇಜುಗಳಲ್ಲಿ ಒಬ್ಬರಿಗೆ ಒಂದು ರೂಲ್ ಇನ್ನೊಬ್ಬರಿಗೆ ಇನ್ನೊಂದು ರೂಲ್ ಮಾಡುವುದಕ್ಕೆ ಸಾಧ್ಯವಿಲ್ಲ. ಮಕ್ಕಳು ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಧರ್ಮ ಪಾಲನೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದ್ರೆ ಆದು ಸಮಾನತೆ ಸಾರುವ ಶಾಲೆಗಳಲ್ಲಿ ಇರಬಾರದು. ಶಿಕ್ಷಣ ಬೇಕಾದ್ರೆ ಅಲ್ಲಿನ ನಿಯಮದಂತೆ ಎಲ್ಲರೂ ಬರಲೇಬೇಕು..ಪಾಲನೆ ಮಾಡಲೇಬೇಕು ಎಂದು ಶಿಕ್ಷಣ ಸಚಿವ ಹೇಳಿದ್ದಾರೆ.