Bengaluru

HIJAB ROW: ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಭ್‌ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ತ್ರಿಸದಸ್ಯಪೀಠದಲ್ಲಿ ಇಂದು ವಿಚಾರಣೆ ನಡೆಯುತ್ತಿದೆ.  ಹಿಜಾಬ್‌ ನಿರ್ಬಂಧ ಪ್ರಶ್ನಿಸಿರುವ ಅರ್ಜಿದಾರರ ಪರ ವಕೀಲ ದೇವದತ್‌ ಕಾಮತ್‌, ವಾದ ಮಂಡಿಸುತ್ತಿದ್ದಾರೆ.

 

ವಕೀಲ ದೇವದತ್‌ ಕಾಮತ್‌ ವಾದ

ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಪಾಲಿಸುವಂತೆ ಆದೇಶಿಸಿರುವ ರಾಜ್ಯ ಸರ್ಕಾರ

ಶಾಲಾ ಅಭಿವೃದ್ಧಿ ಸಮಿತಿಗಳಿಗೆ ಸರ್ಕಾರ ಸೂಚನೆ ನೀಡಿದೆ

ಶಾಲೆಗಳಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸುವಂತೆ ಸೂಚಿಸಿದೆ

ರಾಜ್ಯ  ಸರ್ಕಾರದ ಈ ಆದೇಶ ವಿವೇಚನಾ ರಹಿತವಾಗಿದೆ

ಕೆಲವರ ಉಡುಪಿನಿಂದ ಸಮವಸ್ತ್ರಕ್ಕೆ ಸಂಹಿತೆಗೆ ದಕ್ಕೆಯಾಗಿದೆ

ಮೂರು ಹೈಕೋರ್ಟ್‌ಗಳ ತೀರ್ಪನ್ನು ಸರ್ಕಾರ ಉಲ್ಲೇಖಿಸಿದೆ

ಸರ್ಕಾರ ತನ್ನ ಆದೇಶದಲ್ಲಿ ತೀರ್ಪು ಉಲ್ಲೇಖಿಸಿದೆ

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸೂಚಿಸಿದ ಸಮವಸ್ತ್ರ ಧರಿಸಬೇಕು

ಪಿಯು ವಿದ್ಯಾರ್ಥಿಗಳು ಕೂಡಾ ಸಮವಸ್ತ್ರ ಧರಿಸಬೇಕು

ಕಾಲೇಜು ಆಡಳಿತ ಮಂಡಳಿ ಸೂಚಿಸಿದ ಸಮವಸ್ತ್ರ ಧರಿಸಬೇಕು

ಸರ್ಕಾರಿ ಆದೇಶದಲ್ಲಿ ಹೀಗೆಂದು ಉಲ್ಲೇಖಿಸಲಾಗಿದೆ

ಹಿಜಾಬ್‌ ಸಂವಿಧಾನದ 25(1) ಬರುವುದಿಲ್ಲವೆಂದು ಹೇಳಿದೆ

25(1) ರಕ್ಷಣೆಯ ಹೊಣೆ ಕಾಲೇಜು ಅಭಿವೃದ್ಧಿ ಸಮಿತಿಗೆ ನೀಡಿದೆ

ಇದು ಸಂಪೂರ್ಣ ತಪ್ಪೆಂದು ನಾನು ನಿರೂಪಿಸಬಲ್ಲೆ

ಸರ್ಕಾರದ ಈ ನಡೆ ಸಂಪೂರ್ಣ ಕಾನೂನು ಬಾಹಿರವಾಗಿದೆ

 

ವಕೀಲ ದೇವದತ್‌ ಕಾಮತ್‌ಗೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಪ್ರಶ್ನೆ

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ: ನೀವು ಹೇಳುತ್ತಿರುವ ಹಕ್ಕು ನಿರ್ಬಂಧ ರಹಿತ ಪರಿಪೂರ್ಣ ಹಕ್ಕೇ..?

ವಕೀಲ ದೇವದತ್‌ ಕಾಮತ್‌:  ಸಂವಿಧಾನದ 25(1)  ಮೂರು ಬಗೆಯ ನಿರ್ಬಂಧವಿದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯದ ಪ್ರಶ್ನೆಯಿದ್ದರೆ ನಿರ್ಬಂಧವಿದೆ. ಈ ಕೇಸ್‌ನಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾರಣಕ್ಕೆ ನಿರ್ಬಂಧಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ: ಸರ್ಕಾರಿ ಆದೇಶದಲ್ಲಿ ನಿರ್ಬಂದಗಳನ್ನು ವಿಧಿಸಲಾಗಿದೆಯೇ..?

ವಕೀಲ ದೇವದತ್‌ ಕಾಮತ್‌: ಹೌದು, ಹಿಜಾಭ್‌ ನಿರ್ಬಂಧಿಸಬಹುದು ಎಂದು ಹೇಳಿದೆ

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ:  ಸರ್ಕಾರಿ ಆದೇಶ ಸಂಪೂರ್ಣ ಕಾನೂನು ಬಾಹಿರವಾಗಿದೆಯೇ..?

ವಕೀಲ ದೇವದತ್‌ ಕಾಮತ್‌: ಹೌದು ಸರ್ಕಾರದ ಆದೇಶ ಕಾನೂನು ಬಾಹಿರವಾಗಿದೆ

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ: ಕೆಲ ತೀರ್ಪುಗಳ ಹಿನ್ನೆಲೆಯಲ್ಲಿ ಸರ್ಕಾರ ಅಭಿಪ್ರಾಯ ಹೇಳಿದೆಯಲ್ಲವೇ..?

 

ವಕೀಲ ದೇವದತ್‌ ಕಾಮತ್‌: ಹೈಕೋರ್ಟ್‌ಗಳ ತೀರ್ಪುಗಳ ಉಲ್ಲೇಖ – ಮೆಡಿಕಲ್ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿನಿ ತೆರಳುತ್ತಿದ್ದರು. ಹಿಜಾಬ್ ಧರಿಸಲು ಅನುಮತಿ ನೀಡಿರಲಿಲ್ಲ. ಆಗ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದಾಗ ತೀರ್ಪು ನೀಡಿದೆ. ಅತ್ಯಗತ್ಯವಾದ ಧಾರ್ಮಿಕ ಆಚರಣೆಗಳಿಗೂ ಮಾನದಂಡಗಳಿವೆ. ಷರಿಯಾ ಕಾನೂನಿನ ಬಗ್ಗೆಯೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ತೀರ್ಪಿನಲ್ಲಿರುವ ಹದೀತ್, ಖುರಾನ್ ಬಗ್ಗೆ ಉಲ್ಲೇಖಿಸಲಾಗಿದೆ. ‌ ಪೇಜ್ ನಂಬರ್‌ 30ರಲ್ಲಿರುವ ಪ್ಯಾರಾ 20ರಲ್ಲಿ ಧಾರ್ಮಿಕ ಗ್ರಂಥ ಉಲ್ಲೇಖಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ: ಮೊದಲಿನಿಂದಲೂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುತ್ತಿದ್ದರೇ..?

ವಕೀಲ ದೇವದತ್‌ ಕಾಮತ್‌: ಹೌದು, ಸಮವಸ್ತ್ರದ ಬಣ್ಣದ ಹಿಜಾಬ್‌ ಧರಿಸುತ್ತಿದ್ದರು. ಕೇಂದ್ರೀಯ ವಿದ್ಯಾಲಯಗಳಲ್ಲಿ ಈಗಲೂ ಹಿಜಾಬ್‌ಗೆ ಅವಕಾಶವಿದೆ. ಸಮವಸ್ತ್ರದ ಬಣ್ಣದ ಹಿಜಾಬ್‌ ಧರಿಸಲು ಅವಕಾಶವಿದೆ.

ವಕೀಲ ದೇವದತ್‌ ಕಾಮತ್‌: 2016 ರಲ್ಲಿ ಸಮವಸ್ತ್ರ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಸಿಬಿಎಸ್‌ಇ ಪರಿಷ್ಕೃತ ಆದೇಶವನ್ನು ಶಾಲೆಗಳಿಗೆ ನೀಡಿತ್ತು. ಹಿಜಾಬ್ ಧರಿಸಿ ಬರುವವರು ಅರ್ಧ ಗಂಟೆ ಮುಂಚೆ ಬರುವಂತೆ ಆದೇಶಿಸಿತ್ತು. ಹಿಜಾಬ್ ಪರಿಶೀಲನೆ ನಡೆಸಲು ನಮಗೆ ಆಕ್ಷೇಪ ಇಲ್ಲ.

 

ಮುಖ್ಯ ನ್ಯಾಯಮೂರ್ತಿ: ವಿವಾದಿತ ಶಾಲೆಯ ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್‌ ಧರಿಸುತ್ತಿದ್ದಲೇ..?

ವಕೀಲ ದೇವದತ್‌ ಕಾಮತ್‌: ಕಾಲೇಜಿಗೆ ದಾಖಲಾದಾಗಿನಿಂದಲೂ ಆ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿದ್ದರು. ಸಮವಸ್ತ್ರದ ಬಣ್ಣ ಏನಿದೆಯೋ ಅದೇ ಬಣ್ಣದ ಹಿಜಾಬ್ ಧರಿಸುತ್ತಿದ್ದರು. ವಿದ್ಯಾರ್ಥಿನಿಯರು ಈ ಆಚರಣೆಯನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಹಿಜಾಬ್ ಧರಿಸಬೇಕು, ಉದ್ದದ ನಿಲುವಂಗಿ ಧರಿಸಬೇಕೆಂದು ಅವರ ಧರ್ಮಗ್ರಂಥದಲ್ಲಿ ಕೂಡಾ ಇದೆ.

ವಕೀಲ ದೇವದತ್‌ ಕಾಮತ್‌: ಅಜ್ಮಲ್ ಖಾನ್ ಎಂಬುವರು ಮದ್ರಾಸ್ ಹೈಕೋರ್ಟ್ ಗೆ ಅರ್ಜಿಯೊಂದನ್ನು ಸಲ್ಲಿಸಿದ್ದರು.  ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮಹಿಳೆಯ ಫೋಟೋ ಪ್ರಶ್ನಿಸಲಾಗಿತ್ತು. ಹೈಕೋರ್ಟ್ ಪರದಾ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ. ಆದರೆ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ತೀರ್ಪು ನೀಡಿತ್ತು. ಈ ವೇಳೆ, ಮಲೇಷಿಯಾ ಕೋರ್ಟ್​ನ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದರು.

ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ: ಮಲೇಷಿಯಾ ಜಾತ್ಯಾತೀತ ದೇಶವೇ..?

ವಕೀಲ ದೇವದತ್‌ ಕಾಮತ್‌:  ಇಲ್ಲ, ಮಲೇಷಿಯಾ ಇಸ್ಲಾಮಿಕ್ ದೇಶ. ಆದರೆ ನಮ್ಮ ದೇಶದಲ್ಲಿ ಹಿಜಾಬ್ ಪರವಾಗಿ ಹಲವಾರು ತೀರ್ಪುಗಳು ಬಂದಿವೆ.  ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾ. ಮುಹಮ್ಮದ್ ಮುಷ್ತಾಕ್ ಈ ತೀರ್ಪು ನೀಡಿದ್ದರು. ಸಂವಿಧಾನದ 30 ನೇ ವಿಧಿಯಡಿ ಹೆಚ್ಚಿನ ಹಕ್ಕಿದೆ. ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಸಂವಿಧಾನದತ್ತ ಹಕ್ಕಿದೆ. ಆದರೆ ಇದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲ್ಲ. ಹಿಜಾಬ್ ಧರಿಸಿ ಬರಬೇಕೇ ಬೇಡವೆ ಎಂದು ಶಿಕ್ಷಣ ಸಂಸ್ಥೆ ನಿರ್ಧರಿಸಬಹುದು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ನಿರ್ಧರಿಸಬಹುದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು.

ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ: ಮಲೇಷಿಯಾ ಕೋರ್ಟ್ ತೀರ್ಪಿಗೆ ವ್ಯತಿರಿಕ್ತ ತೀರ್ಪುಗಳಿವೆಯೇ..?

ವಕೀಲ ದೇವದತ್‌ ಕಾಮತ್‌: ನನಗೆ ಗೊತ್ತಿರುವಂತೆ ಅಂತಹ ತೀರ್ಪುಗಳಿಲ್ಲ.

 

Share Post