SDPI ಬಗ್ಗೆ ಬಿಜೆಪಿ ಯಾಕೆ ಚಕಾರವೆತ್ತುತ್ತಿಲ್ಲ; ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು; PFI ಹಾಗೂ SDPI ಒಂದೇ ನಾಣ್ಯದ ಎರಡು ಮುಖಗಳಂತಿದ್ದವು. ಅದ್ರಲ್ಲೂ ಚುನಾವಣಾ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿರುವ SDPI ಸಂಘಟನೆಯ ಬಗ್ಗೆ ಬಿಜೆಪಿ ಸರ್ಕಾರ ಬಗ್ಗೆ ಚಕಾರ ಎತ್ತದಿರುವುದು ಯಾಕೆ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಪಿಎಫ್‌ಐ ನಿಷೇಧ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಲಾಗಿದ್ದು, SDPIಗೂ ಬಿಜೆಪಿಗೂ ಇರುವುದು “ಯಾವ ಜನ್ಮದ ಮೈತ್ರಿ”? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. PFI ಜೊತೆಗೆ ಇದ್ದ ಬಿಜೆಪಿಯ ಹೊಂದಾಣಿಕೆ ಎಂತದ್ದು? ಈ ಆಯಾಮದಲ್ಲಿ NIA ತನಿಖೆ ನಡೆಸಬೇಕು ಅಂತಾನೂ ಕಾಂಗ್ರೆಸ್ ಆಗ್ರಹ ಮಾಡಿದೆ.
ಚುನಾವಣೆ ಸಮಯದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯನ್ನು ಹಾಕಿದರೆ ಕಾಂಗ್ರೆಸ್‌ಗೆ ಬರುವ ಮತಗಳನ್ನು ಒಡೆದಂತಾಗುತ್ತದೆ. ಇದರಿಂದ ಬಿಜೆಪಿ ಲಾಭ ಮಾಡಿಕೊಳ್ಳುತ್ತಿತ್ತು ಅನ್ನೋದು ಕಾಂಗ್ರೆಸ್ ಪರೋಕ್ಷ ಆರೋಪ. ಹಾಗಾದ್ರೆ ಟ್ವೀಟ್‌ನಲ್ಲಿ ಏನಿದೆ..?
ಕಾಂಗ್ರೆಸ್ ಟ್ವೀಟ್‌ನ ಯಥಾವತ್ ಸಾರಾಂಶ
`PFI ಹಾಗೂ SDPI ಒಂದೇ ನಾಣ್ಯದ ಎರಡು ಮುಖಗಳಂತಿದ್ದವು, ಚುನಾವಣಾ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿರುವ SDPI ಸಂಘಟನೆಯ ಬಗ್ಗೆ ಚಕಾರ ಎತ್ತದಿರುವುದೇಕೆ ಬಿಜೆಪಿ ಸರ್ಕಾರ. SDPIಗೂ ಬಿಜೆಪಿಗೂ ಇರುವುದು “ಯಾವ ಜನ್ಮದ ಮೈತ್ರಿ”? PFI ಜೊತೆಗೆ ಇದ್ದ ಬಿಜೆಪಿಯ ಹೊಂದಾಣಿಕೆ ಎಂತದ್ದು? ಈ ಆಯಾಮದಲ್ಲಿ NIA ತನಿಖೆ ನಡೆಸಬೇಕಿದೆ.’
ಇನ್ನೊಂದು ಟ್ವೀಟ್‌ನಲ್ಲಿ ಪಿಎಫ್‌ಐ ನಿಷೇಧ ಮಾಡಿರುವುದನ್ನು ಕರ್ನಾಟಕ ಕಾಂಗ್ರೆಸ್ ಸ್ವಾಗತ ಮಾಡಿದೆ. ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿಕೊಂಡೇ ಬಂದಿದೆ. PFI ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ, ಶಾಂತಿ, ಸಾಮರಸ್ಯ ಕದಡುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಟ್ವೀಟ್ ಮಾಡಲಾಗಿದೆ.