Bengaluru

ಹಿಜಾಬ್‌ ವಿವಾದ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ

ಬೆಂಗಳೂರು(Bengaluru): ರಾಜ್ಯದಲ್ಲಿ ಹಿಜಾಬ್/‌ ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಈ ಬಗ್ಗೆ ಹೈ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಕೋರ್ಟ್‌ನ(Highcourt)  ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಶುರುವಾಗಿದೆ. ಹಿಜಾಬ್‌ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ನಡೆಯುತ್ತಿದ್ದು ಅರ್ಜಿದಾರರ ಪರ ಹಿರಿಯ ವಕೀಲ ದೇವದತ್‌ ಕಾಂತ್‌ ವಾದ ಮಂಡಿಸಿದ್ದಾರೆ. ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಆಚರಣೆಯಾgiದೆ. ಪವಿತ್ರ ಖುರಾನ್‌ನಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ. ಅದರ ಆಧಾರದ ಮೇಲೆ ಸರ್ಕಾರ ವಿದ್ಯಾರ್ಥಿನಿಯರ ಹಕ್ಕನ್ನು ಉಲ್ಲಂಘಟನೆ ಮಾಡಿದೆ. ಸಂವಿಧಾನದ(constitution) 19(1)A ಅಡಿ ಇಚ್ಛೆಯ ಬಟ್ಟೆ ಧರಿಸುವುದು ಹಕ್ಕು ಧಾರ್ಮಿಕ ಆಚರಣೆ, ಸರ್ಕಾರದ ನಿಯಮದ ನಡುವೆ ಗೊಂದಲವಿದ್ರೆ ಕೋರ್ಟ್‌ ಇದನ್ನು ತೀರ್ಮಾನ ಮಾಡಬೇಕು ಎಂದ್ರು.

ಈ ನಡುವೆ ಲಕ್ಷ್ಮೀಂದ್ರ ಸ್ವಾಮಿಯರ್‌ v/sರಾಜ್ಯ ಅಮೆರಿಕಾ ಸಂವಿಧಾನ ಹಳೆಯ ತೀರ್ಪನ್ನು ಹೈಕೋರ್ಟ್‌ ಉಲ್ಲೇಖಿಸಿದೆ. ಇಸ್ಲಾಂನ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆ..?ಅರ್ಜಿದಾರರಿಗೆ ಹೈಕೋರ್ಟ್‌ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಿ ಅರ್ಜಿದಾರರ ಪರ ವಕೀಲರು ಖುರಾನ್‌ನಲ್ಲಿ ಸೂಚಿಸಿರುವ ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗ. ಈ ಬಗ್ಗೆ ಕೇರಳ ಹೈಕೋರ್ಟ್‌(Kerala highcourt) ನೀಡಿರುವ ತೀರ್ಪನ್ನು ಉಲ್ಲೇಖಿಸುತ್ತೇನೆ ಎಂದು ಕೇರಳ ಹೈಕೋರ್ಟ್‌ ತೀರ್ಪನ್ನು ವಕೀಲ ದೇವದತ್‌ ಕಾಮತ್‌ ಕೋರ್ಟ್‌ ಮುಂದಿಟ್ಟಿದ್ದಾರೆ. ಎದೆಯ ಮೇಲೆ ಶಿರದ ಮೇಲೆ ವಸ್ತ್ರ ಧರಿಸಬೇಕು, ಖಾಸಗಿ ಅಂಗಗಳ ಮೇಲೆ ಬಟ್ಟೆ ಇರಬೇಕು, ಪತಿ, ಮಕ್ಕಳ ಸಖಿಯರ ಮುಂದೆ ಮಾತ್ರ ವಿನಾಯ್ತಿ ನೀಡಲಾಗಿದೆ. ಆಪ್ತವರ್ಗದ ಮುಂದೆ ಹಿಜಾಬ್‌ಗೆ ವಿನಾಯಿತಿ ಇದೆ ಎಂದಿದ್ದಾರೆ.
ಹಿಜಾಬ್‌ ಕೂದಲು ಮತ್ತು ಮುಖವನ್ನು ಮುಚ್ಚಬೇಕು, ಹದೀಸ್‌ ಸೂರಗಳಲ್ಲಿನ ವಚನಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಸಡಿಲವಾದ ಉದ್ದನೆಯ ಬಟ್ಟೆಯನ್ನು ತೊಡಬೇಕು ಅರ್ಜಿದಾರರ ಪರ ವಕೀಲ ದೇವದತ್‌ ಕಾಮತ್‌ ವಾದ ಮಂಡಿಸಿದ್ದಾರೆ. ಮುಸ್ಲಿಂ ವಸ್ತ್ರ ಸಂಹಿತೆ ಉಲ್ಲಂಂಘನೆಯಾದ್ರೆ ಶಿಕ್ಷೆಯಿದೆ. ಮುಖ ಹೊರತುಪಡಿಸಿ ಉಳಿದ ಭಾಗ ಇತರರಿಗೆ ಕಾಣುವಂತೆ ಇರಬಾರದು ಎಂದು ವಾದ ಮಂಡಿಸಿದ್ದಾರೆ.

Share Post