Bengaluru

ಬಡವರು, ಶ್ರಮಿಕರ ಜೀವ ಉಳಿಸುವುದು ಸರ್ಕಾರದ ಕರ್ತವ್ಯ:ಕುಮಾರಸ್ವಾಮಿ

ಬೆಂಗಳೂರು: ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಬಡ, ಕೂಲಿ-ಕಾರ್ಮಿಕರನ್ನು ಸರ್ಕಾರ ಮರೆತಿದೆ, ಹಿರಿಯರು ತಂದ ವ್ಯವಸ್ಥೆಯನ್ನು ನಾವುಗಳು ಯಶಸ್ವಿಗೊಳಿಸಬೇಕು. ಆದರೆ ನಿರೀಕ್ಷೆಗೆ ತಕ್ಕಂತೆ ಅದು ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಕಾರಣದಿಂದಾಗಿ ಸಮಾಜ ಅನಾಹುತಕ್ಕೊಳಗಾಗಿದೆ. ಸರ್ಕಾರ ಪ್ರಮಾಣಿಕ‌ ಪ್ರಯತ್ನಗಳನ್ನ ಮಾಡ್ತಿಲ್ಲ ದೇಶದಲ್ಲಿ ೪.೪೦ ಕೋಟಿ ಶ್ರಮಿಕರು ಕುಗ್ಗಿಹೋಗಿದ್ದಾರೆ. ಬಡವರು, ಶ್ರಮಿಕರ ಜೀವ ಉಳಿಸಬೇಕು ಆದರೆ ಅವರ ಬದುಕು ಕಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಇವತ್ತು ‌ಗಣರಾಜ್ಯೋತ್ಸವ ಆಚರಣೆ ಮಾಡ್ತಿದ್ದೇವೆ ಇವತ್ತಿನಿಂದ ಆದರೂ ದೇಶದ ಜನರ ಬದುಕನ್ನು ಎತ್ತಿ‌ಹಿಡಿಯಬೇಕಿದೆ.

ಪ್ರಗತಿಯನ್ನ ಸಾಧಿಸುವಲ್ಲಿ ಸರ್ಕಾರ ಸಫಲವಾಗಿಲ್ಲ. ಪ್ರತಿಯೊಬ್ಬರೂ ಅವರವರ ಜವಾಬ್ದಾರಿಗಳು ಅವರವರು ಸರಿಯಾಗಿ ನಿಭಾಯಿಸಬೇಕಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Share Post