ಅಪ್ಪು ಅವರ ಜೇಮ್ಸ್ ಚಿತ್ರದ ಪೋಸ್ಟರ್ ರಿಲೀಸ್
ಬೆಂಗಳೂರು : ಪುನೀತ್ ರಾಜ್‌ಕುಮಾರ್ ಅವರು ಅಗಲಿ ೩ ತಿಂಗಳಾಗಿದೆ. ಜನರು ಸಾಕಷ್ಟು ನೋವಲ್ಲಿದ್ದಾರೆ. ನಿನ್ನೆ ಜೇಮ್ಸ್ ಚಿತ್ರತಂಡದಿಂದ ಒಂದು ಸುದ್ದಿ ಬಂದಿತ್ತು. ಗಣರಾಜ್ಯೋತ್ಸವ ದಿನಕ್ಕೆ ಅಪ್ಪು ಅವರ ಫರ್ಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ಇಂದು ಬೆಳಗ್ಗೆ 11.11ಕ್ಕೆ ಜೇಮ್ಸ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಚಿತ್ರದ ಪೋಸ್ಟರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ರಾಜಕುಮಾರ ಖ್ಯಾತಿಯ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಇಂದು ಬಿಡುಗಡೆಗೊಂಡಿರುವ ಪೋಸ್ಟರ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪುನೀತ್ ಅವರ ಕೊನೆಯ ಸಿನಿಮಾ ಇದಾಗಿದ್ದು ಅಭಿಮಾನಿಗಳು ಭಾವುಕರಾಗಿ ಸ್ವೀಕರಿಸಲಿದ್ದಾರೆ.
ಸಿನಿಮಾವನ್ನು ಪುನೀತ್ ಅವರ ಜನ್ಮದಿನದಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಆದರೆ ಎಲ್ಲವೂ ಕೊರೊನಾ ಮೇಲೆ ಅವಲಂಬಿತವಾಗಿದೆ. ಚಿತ್ರಮಂದಿರದಲ್ಲಿ 100% ಆಸನಕ್ಕೆ ಅವಕಾಶ ಕೊಡುವವರೆಗೂ ಚಿತ್ರವನ್ನು ಬಿಡುಗಡೆ ಮಾಡುವುದು ಅನುಮಾನ.
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
Wish you all a "Happy Republic Day". @PRKAudio @PriyaAnand #KishorePathikonda @BahaddurChethan @actorsrikanth @realsarathkumar @charanrajmr2701 #BoloBoloJames pic.twitter.com/oFW615ISJD— Ashwini Puneeth Rajkumar (@ashwinipuneet) January 26, 2022