5 ಕೋಟಿ ಅಲ್ಲ, 3 ಕೋಟಿ ಅಷ್ಟೇ ಪಡೆದಿದ್ದು; ತಪ್ಪೊಪ್ಪಿಕೊಂಡಳಾ ಚೈತ್ರಾ ಕುಂದಾಪುರ..?
ಬೆಂಗಳೂರು; ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಐದು ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಬಂಧಿತಳಾಗಿರುವ ಚೈತ್ರ ಕುಂದಾಪುರ ಹಾಗೂ ಇತರ ಆರೋಪಿಗಳನ್ನು ಸಿಸಿಬಿ ಪೊಲಿಸರು ನಿನ್ನೆಯಿಂದ ವಿಚಾರಣೆ ನಡೆಸುತ್ತಿದ್ದಾರೆ. ಚೈತ್ರಾ ಕುಂದಾಪುರ ಸೇರಿ ಇತರೆ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದ್ರೆ ಐದು ಕೋಟಿ ರೂಪಾಯಿ ಪಡೆದಿಲ್ಲ. ನಾವು ಪಡೆದಿರೋದು ಮೂರು ಕೋಟಿ ಮಾತ್ರ ಎಂದು ಚೈತ್ರಾ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಆದ್ರೆ ಆ ಹಣ ಎಲ್ಲಿದೆ ಎಂದು ಕೇಳಿದರೆ ಅದಕ್ಕೆ ಉತ್ತರ ಕೊಡೋದಕ್ಕೆ ಆರೋಪಿಗಳು ರೆಡಿ ಇಲ್ಲ. ಎಲ್ಲಿದೆಯೋ ಗೊತ್ತಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.
ಪ್ರಕರಣದ ಏಳನೇ ಆರೋಪಿ ಶ್ರೀಕಾಂತ್ ಎಂಬಾತ ತಾನೇ ಗೋವಿಂದ ಬಾಬು ಪೂಜಾರಿಯವರಿಂದ ಹಣ ಪಡೆದು ಚೈತ್ರಾ ಕುಂದಾಪುರ ಹಾಗೂ ಗಗನ್‌ಗೆ ನೀಡಿದ್ದೇನೆ ಎಂದು ಹೇಳಿದ್ದಾನೆ. ಅದನ್ನು ಚೈತ್ರಾ ಕೂಡಾ ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಅಂಡ್ ಗ್ಯಾಂಗ್ ನಂಬಿಸಿ ಗೋವಿಂದ ಬಾಬು ಅವರಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿದ್ದರು. ಇದೀಗ ಗೋವಿಂದ ಬಾಬು ಪೂಜಾರಿ ಕೇಸ್ ದಾಖಲಿಸಿದ್ದು, ಸಿಸಿಬಿ ಪೊಲೀಸರು ಇದರ ವಿಚಾರಣೆ ನಡೆಸುತ್ತಿದ್ದಾರೆ.