ಹೆಚ್ಡಿಕೆ ಪೆನ್‌ಡ್ರೈವ್ ಬಾಂಬ್; ಟೆಂಟ್ ಬ್ಲ್ಯೂಫಿಲ್ಮ್ ತೋರಿಸಿದ್ದು ಯಾರು..?
ಬೆಂಗಳೂರು; ವರ್ಗಾವಣೆ ದಂಧೆ ನಡೆಯುತ್ತಿರುವುದರಿಂದ ಬಗ್ಗೆ ನನ್ನ ಬಳಿ ದಾಖಲಿ ಇದೆ. ಈ ಪೆನ್‌ಡ್ರೈವ್‌ನಲ್ಲಿ ಎಲ್ಲಾ ದಾಖಲೆ ಅಡಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಪೆನ್‌ಡ್ರೈವ್ ತೋರಿಸಿ ವಾಗ್ದಾಳಿ ನಡೆಸಿದೆ. ವಿಧಾಸೌಧದ ಕೆಂಗಲ್ ಹನುಮಂತಯ್ಯ ಗೇಟ್ ಬಳಿ ಮಾತನಾಡಿದ ಅವರು, ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ. ನನ್ನ ಬಳಿ ದಾಖಲೆ ಇರುವ ಪೆನ್‌ಡ್ರೈವ್ ಇದೆ. ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಜೇಬಿನಲ್ಲಿ ಪೆನ್‌ಡ್ರೈವ್ ಇಟ್ಟುಕೊಂಡು ಕುಮಾರಸ್ವಾಮಿಯವರು ಸದನಕ್ಕೆ ಹಾಜರಾದರು. ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಕೆಲ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರ ಬಗ್ಗೆ ಮಾತನಾಡಿದ್ದಾರೆ. ಆದ್ರೆ, ನಾನು ಇವರ ಬಂಡವಾಳವನ್ನು ಬಿಚ್ಚಿಡುತ್ತೇವೆ. ಇಂಧನ ಇಲಾಖೆ ಹತ್ತು ಕೋಟಿ ರೂಪಾಯಿ ಬಿಕರಿಯಾಗಿದೆ. ಇಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ಇನ್ನು ಇದೇ ವೇಳೆ ಕುಮಾರಸ್ವಾಮಿಯವರು, ಟೆಂಟ್‌ನಲ್ಲಿ ಬ್ಲ್ಯೂ ಫೀಲ್ಮ್ ತೋರಿಸಿ ಬಂದವನಲ್ಲ ನಾನು. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದಿದ್ದೀನಾ..? ಎಂದು ಪ್ರಶ್ನೆ ಮಾಡುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.