Bengaluru

ಚನ್ನಪಟ್ಟಣ ಕ್ಷೇತ್ರದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (KRDCL) ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ನಡೆಸಿದರು. ಎಲ್ಲ ಯೋಜನೆಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಸೂಚನೆ ನೀಡಿದ ಅವರು, ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

*ರಾಮನಗರ ಕ್ಷೇತ್ರದ ಭೈರಮಂಗಲ ಕ್ರಾಸ್- ಕಂಚುಗಾರನಹಳ್ಳಿ – ಹಾರೋಹಳ್ಳಿ – ತಟ್ಟೆಕೆರೆ, ಉರಗನದೊಡ್ಡಿ – ಜಿಗಣಿ ನಡುವಿನ 9.87 ಕಿ. ಮೀ. ಉದ್ದದ ದ್ವಿಪಥ ರಸ್ತೆ.

*ರಾಮನಗರ ತಾಲೂಕಿನ ಲಿಂಗೇಗೌಡನ ದೊಡ್ಡಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ.

*ಹಾರೋಹಳ್ಳಿಯಿಂದ ಮರಳವಾಡಿ, ಹುಣಸನಹಳ್ಳಿ, ಬನ್ನಿಮಕೊಡಲು, ಹಾಲನಾಥ, ಕೋಡಿಹಳ್ಳಿ, ಸಾತನೂರು, ಕಬ್ಬಾಳು, ಚನ್ನಪಟ್ಟಣ, ತಿಟ್ಟಮರನಹಳ್ಳಿ, ಬೇವೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 33 ಸೇರುವ ಸಂಪರ್ಕ ರಸ್ತೆ ಅಗಲೀಕರಣ.

*ಚನ್ನಪಟ್ಟಣದಿಂದ ಬ್ರಾಹ್ಮಣಿಪುರ, ಕವನಪುರ, ಎಸ್ ಆರ್ ಎಸ್ ಬೆಟ್ಟ, ಅವ್ವೇರಹಳ್ಳಿ, ಕೈಲಾಂಚ, ನಾಗೋಹಳ್ಳಿ,
ಹುಣಸನಹಳ್ಳಿ, ಉರಗನಹಳ್ಳಿ, ಬಿಡದಿ, ಗಾನಕಲ್ಲು ಮಾರ್ಗವಾಗಿ ನೆಲಮಂಗಲ ಸೇರುವ ರಸ್ತೆಯ ಅಲೀಕರಣ.

*ಬಿಡದಿಯಿಂದ ಹಾರೋಹಳ್ಳಿ, ಉರಗನ ದೊಡ್ಡಿ, ಆನೇಕಲ್, ಅತ್ತಿಬೆಲೆಯಿಂದ ರಾಷ್ಟ್ರೀಯ ಹೆದ್ದಾರಿ 4 ಅನ್ನು ಸೇರುವ ರಸ್ತೆಯ ಅಲೀಕರಣ.

*ಕೆಂಗಲ್ ನಿಂದ ದಶವಾರ, ಮಾಕಳಿ ಮೂಲಕ ರಾಜ್ಯ ಹೆದ್ದಾರಿ 33 ಅನ್ನು ಸೇರುವ ರಸ್ತೆ ಅಗಲೀಕರಣ.

*ಚನ್ನಪಟ್ಟಣ ತಾಲೂಕು ಗುಡಿಸರಗೂರು – ಬೆಳತರುದೊಡ್ಡಿ ರಸ್ತೆ ಕೂಡುವ ಗುಡಿಸರಗೂರು ಬಳಿ ಶಿಂಷಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ.

*ಚನ್ನಪಟ್ಟಣ ತಾಲೂಕಿನ ಚಿಕ್ಕಾಮಾಲೂರು- ಸೋಗಲ ಕೂಡುವ ರಸ್ತೆಯ ಬಳಿ ಕಣ್ವಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ.

ಇವಿಷ್ಟೂ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ನಿಗಮದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.

Share Post