Health

ನಲವತ್ತು ಸಾವಿರ ದಾಟಿದ ಕೊವಿಡ್‌ ರೋಗಿಗಳ ಸಂಖ್ಯೆ..!

ಬೆಂಗಳೂರು: ರಾಜ್ಯದಲ್ಲಿ ಕೊವಿಡ್‌ ರೋಗಿಗಳು ಸಂಖ್ಯೆ ಹೆಚ್ಚುತ್ತಲೇ ಇದೆ. ದಿನವೂ ಸಾವಿರಾರು ಸಂಖ್ಯೆಗಳಲ್ಲಿ ರೋಗಿಗಳ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ ಕಳೆದ ೨೪ ಗಂಟೆಗಳಲ್ಲಿ 41,457 ಮಂದಿ ಕೊವಿಡ್‌ ಸೋಂಕಿರುವುದು ಪತ್ತೆಯಾಗಿದೆ. ಇವತ್ತೂ ಕೂಡಾ ಬೆಂಗಳೂರು ನಗರದ ಜನಕ್ಕೇ ಹೆಚ್ಚು ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 25595 ಮಂದಿಗೆ ಇಂದು ಕರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಇಂದು ಏಳು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯಾದ್ಯಂತ ಒಟ್ಟು ೨೦ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 1,85,872 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ

ಹಿಂದಿನ ದಿನಕ್ಕೆ ಹೋಲಿಸಿಕೊಂಡರೆ ಕೊರೊನಾ ಸೋಂಕಿತರ ಸಂಖ್ಯೆ ಇಂದು ಶೇ.೨೨.೩೦ರಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಇಂದು 8,353 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 2,50,381 ಸಕ್ರಿಯ ಪ್ರಕರಣಗಳಿವೆ.

Share Post