ಸಂಚಾರಿ ಪರೀಕ್ಷಾ ಘಟಕಕ್ಕೆ ಗೌರವ್ ಗುಪ್ತಾ ಚಾಲನೆ
ಬೆಂಗಳೂರು: ಝೆರೊಧಾ ಪ್ರಾಯೋಜಕತ್ವ, ಮಂತ್ರ 4 ಚೇಂಜ್ ಹಾಗೂ ಸೂರ್ಯ ಫೌಂಡೇಶನ್ ಸಂಸ್ಥೆಗಳು ಬಿಬಿಎಂಪಿ ಸಹಯೋಗದೊಂದಿಗೆ ದಕ್ಷಿಣ ವಲಯ ವ್ಯಾಪ್ತಿಗೆ ಒಂದು ಸಂಚಾರಿ ಪರೀಕ್ಷಾ ಘಟಕ(ಮೊಬೈಲ್ ಟೆಸ್ಟಿಂಗ್ ಯುನಿಟ್-MTU)ವನ್ನು ಪಾಲಿಕೆಗೆ ಹಸ್ತಾಂತರಿಸಿದ್ದು, ಮಾನ್ಯ ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ಎಂ.ಟಿ.ಯುಗೆ ಚಾಲನೆ ನೀಡಿದ್ರು.
ಈ ಸಂಚಾರಿ ಪರೀಕ್ಷಾ ಘಟಕವು ಪಾಲಿಕೆಯ ದಕ್ಷಿಣ ವಲಯದ ವಾರ್ ರೂಂ ಮತ್ತು ಸಂಚಾರಿ ಟ್ರಯಾಜ್ ಘಟಕದೊಂದಿಗೆ ಸಂಪರ್ಕ ಹೊಂದಿರುತ್ತದೆ. ವಾರ್ ರೂಂನಲ್ಲಿ ಸ್ವೀಕರಿಸಲ್ಪಡುವ ಕರೆಗಳಿಗೆ ಅನುಸಾರವಾಗಿ ಸಂಚಾರಿ ಪರೀಕ್ಷಾ ಘಟಕವು ವಲಯದ 44 ವಾರ್ಡ್ ಗಳಲ್ಲಿಯೂ 24X7 ಕಾರ್ಯನಿರ್ವಹಿಸಲಿದ್ದು, ದಕ್ಷಿಣ ವಲಯದಲ್ಲಿ ಯಶಸ್ವಿಯಾದರೆ ಉಳಿದ 7 ವಲಯಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಯೋಚನೆಯಿದೆ.
ಈ ಸಂಚಾರಿ ಪರೀಕ್ಷಾ ಘಟಕದಲ್ಲಿ ಓರ್ವ ಚಾಲಕ ಮತ್ತು ಓರ್ವ ಪ್ಯಾರಾಮೆಡಿಕ್ ಇರಲಿದ್ದು, ಪ್ಯಾರಾಮೆಡಿಕ್ ಸಿಬ್ಬಂದಿಯು ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡುತ್ತಾರೆ. ಪಾಸಿಟಿವ್ ದೃಢಪಟ್ಟಲ್ಲಿ ವ್ಯಕ್ತಿಗೆ ಪಾಲಿಕೆಯಿಂದ ಕರೆ ಬರುತ್ತದೆ. ಪ್ರಕರಣದ ಗಂಭೀರತೆಯ ಆಧಾರದ ಮೇಲೆ, ಟ್ರಯಾಜ್ ಬಳಿಕ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತದೆ.
ದಕ್ಷಿಣ ವಲಯದ 6 ಕೋವಿಡ್ ಆರೈಕೆ ಕೇಂದ್ರಗಳಿಗೆ ನೀಡಿರುವ ಆರೋಗ್ಯ ಪರಿಕರಗಳು
1. N95 ಮಾಸ್ಕ್ ಗಳು- 1,000
2. PPE ಕಿಟ್ ಗಳು- 300
3. ಪರೀಕ್ಷಾ ಕಿಟ್ ಗಳು- 500
4. ಥರ್ಮಲ್ ಸ್ಕ್ಯಾನರ್ ಗಳು- 15
5. ಸ್ಯಾನಿಟೈಸರ್- 220 ಲೀಟರ್