Cinema

ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಸಹೋದರಿಯಾಗಿ ಸಾಯಿ ಪಲ್ಲವಿ ನಟನೆ..?

ಹೈದರಾಬಾದ್:‌   ತೆಲುಗು ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮುಂಬರುವ ಸಿನಿಮಾದಲ್ಲಿ ಬಹುಬೇಡಿಕೆ ನಟಿ ಸಾಯಿ ಪಲ್ಲವಿ, ಮಹೇಶ್‌ ಬಾಬು ಸಹೋದರಿಯಾಗಿ ನಟನೆ ಮಾಡಲಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಇವರ ಸಿನಿಮಾಗೆ ಮಹೇಶ್‌ ಬಾಬುಗೆ ಹಿಟ್‌ ಸಿನಿಮಾಗಳನ್ನು ನೀಡಿದ ಡೈರೆಕ್ಟರ್‌ ತ್ರಿವಿಕ್ರಮ್‌ ಈ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

ಮಹೇಶ್‌ ಬಾಬು ಮತ್ತು ತ್ರಿವಿಕ್ರಮ್‌ ಕಾಂಬಿನೇಷನ್‌ನಲ್ಲಿ ಅತಡು, ಖಲೇಜಾ ಸಿನಿಮಾಗಳು ಹೆಸರು ಮಾಡಿದ್ವು, ಇದೀಗ ಪ್ರಿನ್ಸ್‌ ಜೊತೆ ಮೂರನೇ ಸಿನಿಮಾ ಡೈರೆಕ್ಟ್‌ ಮಾಡಲು ಒಂದು ಮಾಸ್‌ ಸ್ಟೋರಿಯೊಂದಿಗೆ ರೆಡಿ ಇದ್ದಾರಂತೆ ತ್ರಿವಿಕ್ರಮ್.‌ ಬರೋಬ್ಬರಿ 11ವರ್ಷಗಳ ಬಳಿಕ ಮತ್ತೆ ಈ ಜೋಡಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಅಂತಿದಾರೆ ನೆಟ್ಟಿಗರು.

ಈ ಸಿನಿಮಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ಹೆಸರು ಥಳಕು ಹಾಕಿಕೊಂಡಿದೆ. ಅಲ್ಲದೆ ಬಹಳ ಮುಖ್ಯವಾದ ಪಾತ್ರವಾದ ಸಹೋದರಿ ಕ್ಯಾರೆಕ್ಟರ್‌ಗೆ ಸಾಯಿ ಪಲ್ಲವಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯಿದೆ.
ಆದರೆ ಈ ಮೊದಲು ಚಿರಂಜೀವಿ ನಟನೆಯ ಸಿನಿಮಾವೊಂದರಲ್ಲಿ ತಂಗಿಯಾಗಿ ನಟಿಸಲು ಒಪ್ಪದ ಸಾಯಿ ಪಲ್ಲವಿ, ಈಗ ಯೆಂಗ್‌ ಅಂಡ್‌ ಎನರ್ಜೆಟಿಕ್‌ ಸ್ಟಾರ್‌ ಆಗಿರುವ ಮಹೇಶ್‌ ಬಾಬುಗೆ ತಂಗಿ ಪಾತ್ರದಲ್ಲಿ ನಟನೆ ಮಾಡ್ತಾರಾ ಎಂದು ಪ್ರಶ್ನೆಗಳು ಕೂಡ ಹರಿದಾಡ್ತಿವೆ.

Share Post