ಶಿಂಧೆ ಬಣಕ್ಕೆ ಚಿಹ್ನೆ ನೀಡುವ ನಿರ್ಧಾರ ಸದ್ಯಕ್ಕೆ ಬೇಡ; ಸುಪ್ರೀಂ ಸೂಚನೆ
ನವದೆಹಲಿ; ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಭಾಗವಾಗಿದೆ. ಏಕನಾಥ್ ಶಿಂಧೆ ಅವರು ಶಿವಸೇನೆ ಬಹುತೇಕ ಶಾಸಕರನ್ನು ಕರೆದುಕೊಂಡು ಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ.. ಬಹುತೇಕ ಶಾಸಕರು ನನ್ನ ಜೊತೆಯೇ ಇದ್ದು, ಶಿವಸೇನಾ ನಮಗೆ ಸೇರಬೇಕು. ಶಿವಸೇನಾ ಚಿಹ್ನೆಯನ್ನು ನಮ್ಮ ಬಣಕ್ಕೇ ನೀಡಬೇಕು ಎಂದು ಮನವಿ ಮಾಡಿದ್ದರು.. ಶಿಂಧೆ ಬಣ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಈ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಬಿಲ್ಲು ಮತ್ತು ಬಾಣ ಶಿವಸೇನಾದ ಚುನಾವಣಾ ಗುರುತಾಗಿದೆ. ಅದು ನಮಗೇ ಸೇರಬೇಕು ಎಂದು ಶಿಂಧೆ ಬಣ ವಾದಿಸಿದೆ. ಶಿಂಧೆ ಬಣದ ಅರ್ಜಿಯ ಕುರಿತ ನೋಟಿಸ್‌ಗೆ ಉತ್ತರಿಸಲು ಉದ್ಧವ್ ಠಾಕ್ರೆ ನೇತೃತ್ವದ ಬಣವು ಸಮಯ ಕೋರಿದರೆ, ಆ ಮನವಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿತು.