ಸಿಎಂ ಬೊಮ್ಮಾಯಿ ಭೇಟಿಯಾಗಲಿರುವ ಫಿಲಂ ಚೇಂಬರ್ ಅಧ್ಯಕ್ಷರು
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನು ನಿಯಂತ್ರಿಸಲು ಸರ್ಕಾರ ಕೆಲ ಹೊಸ ಮಾರ್ಗಸೂಚಿ ಜಾರಿಮಾಡಿದೆ. ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ವಿಧಿಸಿದೆ.
ಇಂದಿನಿಂದ ರಾತ್ರಿ ೧೦ ಗಂಟೆಯಿಂದ ಸೋಮವಾರ ಬೆಳಗ್ಗೆ ೫ ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ವಿಧಿಸಿದೆ. ಅಗತ್ಯ ವಸ್ತುಗಳು ಹೊರತುಪಡಿಸಿ ಉಳಿದ ಎಲ್ಲವೂ ಬಂದ್ ಆಗಲಿದೆ. ಈಗಾಗಲೇ ಚಿತ್ರಮಂದಿರ, ಕಲ್ಯಾಣಮಂಟಪ ಇತರರಿಗೆ ಕಷ್ಟವಾಗಲಿದೆ. ವೀಕೆಂಡ್ ಕರ್ಫ್ಯೂನಿಂದ ಚಿತ್ರರಂಗಕ್ಕೆ ಆರ್ಥಿಕ ಕಷ್ಟ ಎದುರಾಗಿದೆ. ಯಾಕಂದರೆ ಶುಕ್ರವಾರ ಸಿನಿಮಾ ರಿಲೀಸ್ ಆದರೂ ಕೂಡ ಜನರು ವೀಕೆಂಡ್ ನಲ್ಲೇ ಜಾಸ್ತಿ ಚಿತ್ರಮಂದಿರಗಳಿಗೆ ಬರುತ್ತಿದ್ದರು. ಆದರೆ ಕರ್ಫ್ಯೂನಿಂದಾಗಿ ಚಿತ್ರಮಂದಿರಗಳು ಬಂದ್ ಆಗಲಿವೆ. ಇದ್ದರಿಂದ ಸಿನಿಮಾ ನಿರ್ಮಾಪಕರಿಗೆ ಪಟ್ಟು ಬೀಳಲಿದೆ. ಹೀಗಾಗಿ ಇಂದು ಫಿಲ್ಮ ಚೇಂಬರ್ ಅಧ್ಯಕ್ಷರು, ಸದಸ್ಯರೆಲ್ಲರೂ ಸೇರಿಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಿದ್ದಾರೆ. ಶುಕ್ರವಾರ ರಿಲೀಸ್ ಆಗುವಂತಹ ಸಿನಿಮಾಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಲಿದ್ದಾರೆ. ಸದ್ಯ ಸರ್ಕಾರ ಚಿತ್ರಮಂದಿರಗಳಿಗೆ ಶೇ. ೫೦ ಆಸನಗಳಿಗೆ ಮಾತ್ರ ಅವಕಾಶ ನೀಡಿದೆ.