BengaluruPolitics

ಚುನಾವಣಾ ಫಲಿತಾಂಶ; ರಾಜ್ಯ ಹಾಗೂ ಕೇಂದ್ರ ಗುಪ್ತಚರ ಮಾಹಿತಿ ಏನು ಹೇಳುತ್ತೆ..?

ಬೆಂಗಳೂರು; ನಿನ್ನೆ ಮತದಾನ ಮುಗಿದಿದೆ. ಶನಿವಾರ ಫಲಿತಾಂಶ ಕೂಡಾ ಬರಲಿದೆ. ಈ ನಡುವೆ ಯಾರ ಗೆಲ್ಲಬಹುದು..? ಯಾರು ಸೋಲಬಹುದು ಎಂಬುದರ ಬಗ್ಗೆ ಲೆಕ್ಕಾಚಾರಗಳು ಜೋರಾಗಿವೆ. ಅದರಲ್ಲೂ ಖಾಸಗಿ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ ಪರವಾದಂತಹ ವರದಿ ನೀಡಿವೆ. ಇನ್ನು ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಬಹುದು ಎಂದು ಹೇಳುತ್ತಿವೆ. ಈ ನಡುವೆ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಸಂಸ್ಥೆಗಳ ವರದಿ ಕೂಡಾ ಹೊರಬಿದ್ದಿದೆ. ಅದರ ವರದಿ ಕೂಡಾ ಈಗ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ ಗುಪ್ತಚರ ಇಲಾಖೆ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಕಾಂಗ್ರೆಸ್‌ 123 ಸ್ಥಾನಗಳಲ್ಲಿ ಗೆಲ್ಲಲಿದೆಯಂತೆ. ಅಂದರೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದರ್ಥ. ಇನ್ನು ಬಿಜೆಪಿಗೆ 71 ಸ್ಥಾನ, ಜೆಡಿಎಸ್‌ಗೆ 25 ಸ್ಥಾನಗಳು ಹಾಗೂ ಪಕ್ಷೇತರರು 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬುದು ರಾಜ್ಯ ಗುಪ್ತಚರ ಇಲಾಖೆ ನೀಡಿರುವ ವರದಿ.

ಇನ್ನು ಕೇಂದ್ರ ಗುಪ್ತಚರ ಇಲಾಖೆ ಕೂಡಾ ಇಂತಹದ್ದೇ ಫಲಿತಾಂಶ ಬರುತ್ತದೆ ಎಂದು ವರದಿ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಕೇಂದ್ರ ಗುಪ್ತಚರ ಮಾಹಿತಿ ಪ್ರಕಾರ ಕಾಂಗ್ರೆಸ್‌ 115 ಸ್ಥಾನಗಳಲ್ಲಿ ಗೆಲ್ಲಲಿದೆ. ಅಂದರೆ ಕಾಂಗ್ರೆಸ್‌ಗೆ ಸರಳ ಬಹುಮತ ಸಿಗಲಿದೆ. ಬಿಜೆಪಿ 77 ಸ್ಥಾನಗಳಲ್ಲಿ ಗೆಲ್ಲಲಿದ್ದು, ಜೆಡಿಎಸ್‌ 26 ಹಾಗೂ ಪಕ್ಷೇತರರು 7 ಸ್ಥಾನಗಳಲ್ಲಿ ಗೆಲ್ಲುತ್ತಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿಗಳು ಹೇಳುತ್ತಿವೆ.

Share Post