BengaluruPolitics

ಬಿಜೆಪಿಯವರು ರಾಜ್ಯವನ್ನು ನಂಬರ್‌ ವನ್‌ ಮಾಡೋದು ಬೇಡವಾಗಿತ್ತಾ..?

ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೋದಿ, ಅಮಿತ್‌ ಶಾ ಸೇರಿ ಕೇಂದ್ರ ಬಿಜೆಪಿ ನಾಯಕರದ್ದೇ ಅಬ್ಬರವಾಗಿತ್ತು. ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯವನ್ನು ಸುತ್ತಾಡಿದರು. ಹಲವಾರು ರೋಡ್‌ ಶೋಗಳನ್ನು ನಡೆಸಿದರು. ಸಮಾವೇಶಗಳಲ್ಲಿ ಭಾಷಣ ಮಾಡಿದರು. ಈ ವೇಳೆ ಎಲ್ಲಾ ಅವರು ಹೇಳಿದ್ದು, ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿ ರಾಜ್ಯವನ್ನು ನಂಬರ್‌ ವನ್‌ ಮಾಡುತ್ತೇವೆ ಎಂದು. ಡಬಲ್‌ ಎಂಜಿನ್‌ ಸರ್ಕಾರ ಬಂದರೆ ಅಭಿವೃದ್ಧಿ ಸಾಧ್ಯ. ಈ ಬಾರಿಯೂ ಬಿಜೆಪಿ ಬಂದರೆ ಕರ್ನಾಟಕವನ್ನು ನಂಬರ್‌ ವನ್‌ ರಾಜ್ಯ ಮಾಡುತ್ತೇನೆ ಎಂದು ಮೋದಿಯವರು ಹೇಳುತ್ತಾ ಬಂದಿದ್ದರು. 

ಕರ್ನಾಟಕ ನಂಬರ್‌ ವನ್‌ ರಾಜ್ಯ ಆಗೋದು ಬೇಡವಾ ಎಂದು ಮೋದಿ ಜನರನ್ನು ಪ್ರಶ್ನೆ ಮಾಡುತ್ತಾ ಬಂದಿದ್ದರು. ಆದ್ರೆ, ಜನರು ಇದಕ್ಕೆ ಮನ್ನಣೆ ಕೊಟ್ಟಿಲ್ಲ. ತುಂಬಾ ಜನ ಮೋದಿಯವರ ಈ ಮಾತುಗಳು ವ್ಯತಿರಿಕ್ತವಾಗಿ ಉತ್ತರಗಳನ್ನು ಕೊಡುತ್ತಾ ಬಂದಿದ್ದರು. ಪ್ರವಾಹ ಬಂದಾಗ ಮೋದಿ ರಾಜ್ಯಕ್ಕೆ ಬರಲಿಲ್ಲ, ಕೊರೊನಾ ಬಂದಾಗ ಹೆಚ್ಚಿನ ಅನುದಾನ ನೀಡಲಿಲ್ಲ, ಬರ ಬಂದಾಗಲೂ ಮೋದಿ ಈ ಕಡೆ ಗಮನ ಕೊಡಲಿಲ್ಲ. ಈಗ ಬಂದು ನಂಬರ್‌ ವನ್‌ ಮಾಡ್ತೀವಿ ಅಂದ್ರೆ ನಂಬೋಕೆ ಆಗುತ್ತಾ ಎಂದು ಕೇಳಿದವರು ತುಂಬಾ ಜನ ಇದ್ದರು. ಹೀಗಾಗಿಯೋ ಏನೋ ಬಿಜೆಪಿ ನಾಯಕರ ಕರ್ನಾಟಕ ನಂಬರ್‌ ವನ್‌ ಮಾಡುವ ಆಫರ್‌ನ್ನು ರಾಜ್ಯದ ಜನ ನಂಬಲೇ ಇಲ್ಲ. ಹೀಗಾಗಿ ಅವರ ಆಫರ್‌ನ್ನು ತಿರಸ್ಕರಿಸಿದ್ದಾರೆ.

ಇನ್ನು ಕಾಂಗ್ರೆಸ್‌ ಹಲವು ಉಚಿತ ಭರವಸೆಗಳನ್ನು ನೀಡಿದೆ. ಅದು ಸುಳ್ಳಿನ ಭರವಸೆಗಳು. ಅವರು ಕಾಂಗ್ರೆಸ್‌ ಗ್ಯಾರೆಂಟಿ ಎಕ್ಸ್‌ಪೈರ್‌ ಆಗಿದೆ ಎಂದು ಮೋದಿ ಹೇಳುತ್ತಾ ಬಂದಿದ್ದರು. ಆದ್ರೆ, ಜನರು ನಿಮ್ಮ ನಂಬರ್‌ ವನ್‌ ಮಾಡುವ ಭರವಸೆಯೇ ಎಕ್ಸ್‌ಪೈರ್‌ ಆಗಿದೆ ಎಂಬಂತೆ ಉತ್ತರ ಕೊಟ್ಟಿದ್ದಾರೆ. ಜನರಿಗೆ ಮೋದಿ ಮೇಲೆ ಪ್ರೀತಿ ಇದ್ದರೂ ಅವರನ್ನು ಮತ ಹಾಕುವ ಮೂಲಕ ಕೈಹಿಡಿದಿಲ್ಲ.

Share Post