ಹಲಾಲ್ ಅನ್ನೋದು ಆರ್ಥಿಕ ಜಿಹಾದ್; ಬಿಜೆಪಿ ಶಾಸಕ ಸಿ.ಟಿ.ರವಿ
ಬೆಂಗಳೂರು: ಹಲಾಲ್ ಮಾಡೋದು ಮುಸ್ಲಿಂ ಧಾರ್ಮಿಕ ಕ್ರಿಯೆ. ನಾವು ಅದನ್ನು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಆದ್ರೆ ಹಲಾಲ್ ಅನ್ನೋದು ಒಂದು ಆರ್ಥಿಕ ಜಿಹಾದ್ ಆಗುತ್ತಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವ್ಯಾಕೆ ಹಲಾಲ್ ಮಾಡಿದ ಮಟನ್ ಖರೀದಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಹಲಾಲ್ ಮಾಡಿದ ಮಟನ್‌ನ್ನು ಹಿಂದೂಗಳು ತಿನ್ನಬೇಕಾಗಿಲ್ಲ. ಅದನ್ನು ನಾವು ಬಹಿಷ್ಕರಿಸುತ್ತೇವೆ. ಹಿಂದೂ ಮಟನ್ ಸ್ಟಾರ್‌ಗಳಲ್ಲಿ ಮುಸ್ಲೀಮರು ಮಟನ್ ಖರೀಸುತ್ತಾರಾ..?. ಹಾಗಿದ್ಮೇಲೆ ನಾವ್ಯಾಕೆ ಅವರ ಅಂಗಡಿಗಳಲ್ಲಿ ಖರೀದಿ ಮಾಡಬೇಕು..? ಎಂದು ಸಿ.ಟಿ.ರವಿ ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ.