ಧರ್ಮ ದಂಗಲ್ ವಿರುದ್ಧ ಕುಮಾರಸ್ವಾಮಿ ಕಿಡಿ: ತಪ್ಪು ಸಂದೇಶ ನೀಡುವವರನ್ನು ಒದ್ದು ಒಳಗೆ ಹಾಕಿ
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಧರ್ಮ ವ್ಯಾಪಾರದ ಕಿಚ್ಚು ಶುರುವಾಗಿದೆ. ಹಿಂದೂ ದೇವಾಲಯಗಳ ಬಳಿ ಮುಸಲ್ಮಾನರು ಅಂಗಡಿ, ಮುಂಗಟ್ಟುಗಳನ್ನು ತೆರೆಯದಂತೆ ಎಲ್ಲೆಡೆ ಹೋರಾಟ ಶುರುವಾಗಿವೆ. ಇದರ ಮುಂದುವರಿದ ಭಾಗವಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳು ಕೇವಲ ಹಿಂದೂ ಅಂಗಡಿಗೆ ಮಾತ್ರ ಹೋಗಿ ಎಂಬ ಕರಪತ್ರಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ವಿರುದ್ಧವಾಗಿ ಮಾಜಿ ಸಿಎಂ ಹೆಚ್ಡಿಕೆ ಕಿಡಿ ಕಾರಿದ್ದಾರೆ.
ಧರ್ಮ ಸಂಘರ್ಷಕ್ಕೆ ಕರೆಕೊಡುವ ನೀತಿ ಸಮಾಜನವನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕರ್ನಾಟಕ ಶಾಂತಿಯ ತೋಟ. ಇಂತಹ ವ್ಯಕ್ತಿಗಳನ್ನು ಬಹಿಷ್ಕಾರ ಮಾಡದೆ ಹೋದ್ರೆ ರಾಜ್ಯ ಒಳ್ಳೆಯ ದಿನಗಳನ್ನು ಕಾಣಲ್ಲ. ಈ ರಾಜ್ಯದ ಯುವಕರೇ ನೀವು ಇಂತಹ ಮನೆಹಾಳು ಕೆಲಸಗಳಿಗೆ ಕಿವಿಡಗೊಡಬೇಡಿ. ದೇವಸ್ಥಾನ ಕಟ್ಟುವವರು ದಲಿತರು ಅವರನ್ನು ದೇವಸ್ಥಾನದ ಒಳಗೆ ಪೂಜೆ ಮಾಡಲು ಬಿಡುತ್ತೀರಾ. ಅದರಲ್ಲಿ ಕುಳಿತು ಮಜಾ ಮಾಡುವವರು ನೀವುಗಳು ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಕನ್ನಡಿಗರೇ ದಯವಿಟ್ಟ ನಿಮ್ಮಲ್ಲಿ ಮನವಿ ಮಾಡ್ತೇವೆ ದಾರಿ ತಪ್ಪಬೇಡಿ. ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ರೂ ನಾವು ಜವಾಬ್ದಾರಿ ಸ್ಥಾನದಲ್ಲಿದ್ದು ಪ್ರತಿಕ್ರಿಯೆ ನೀಡಿಲ್ಲ ಅಂದ್ರೆ ತಪ್ಪಾಗುತ್ತದೆ.
ಇದೊಂದು ಸರ್ಕಾರನಾ..? ಸರ್ಕಾರ ಅಂತ ಕರೀತಾರಾ..? ಆರು ಕೋಟಿ ಕನ್ನಡಿಗರನ್ನು ರಕ್ಷಿಸುವ ಕೆಲಸ ಮಾಡಬೇಕು. ಅದು ಬಿಟ್ಟು ದಾರಿ ತಪ್ಪುವ ಕೆಲಸಕ್ಕೆ ಮನ್ನಣೆ ನೀಡಬಾರದು. ಸಿಎಂ ವಿರುದ್ಧ ಮಾತನಾಡಿದ್ರೆ ಅರೆಸ್ಟ್ ಮಾಡ್ತೀರ, ಹೀಗೆ ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ, ಹೀಗೆ ಪ್ರಚೋದನೆ ಮಾಡುವವರು ದೇಶವನ್ನು ಉಳಿಸುವುದಿಲ್ಲ. ಶಾಸಕನೇ ಇರಲಿ, ಮಂತ್ರಿಯೇ ಇರಲಿ ಒದ್ದು ಒಳಗಾಗುವ ಕೆಲಸ ಮಾಡಬೇಕು ಎಂದು ಆಕ್ರೋಶದ ನುಡಿಗಳನ್ನಾಡಿದ್ರು.