ಸದ್ಗುರು ಜಗ್ಗಿ ವಾಸುದೇವ್ ಮೆದುಳಲ್ಲಿ ರಕ್ತಸ್ರಾವ; ಶಸ್ತ್ರ ಚಿಕಿತ್ಸೆ
ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಮೆದುಳಲ್ಲಿ ರಕ್ತಸ್ರಾವವಾಗಿದ್ದು ದೆಹಲಿಯಲ್ಲಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅವರು ಆರೋಗ್ಯವಾಗಿದ್ದು, ಅವರೇ ವಿಡಿಯೋ ಸಂದೇಶ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಕೂಡಾ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಜಗ್ಗಿ ವಾಸುದೇವ್ ಅವರ ಜೀವಕ್ಕೇ ಅಪಾಯ ಎದುರಾಗಿತ್ತು. ಆದ್ರೆ ಅವರು ಬದುಕುಳಿದಿದ್ದೇ ಪವಾಡ ಎಂದು ತಿಳಿದುಬಂದಿದೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರುಗೆ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ದೆಹಲಿಯ ಅಪೋಲೋ ಆಸ್ಪತ್ರೆಯ ನ್ಯೂರಾಲಿಜಿಸ್ಟ್ ಡಾ. ವಿನಿತ್ ಸೂರಿ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದೆ. ವೈದ್ಯರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸದ್ಗುರಯ ಜಗ್ಗಿ ವಾಸುದೇವ್ ಅವರು ಜೀವದ ಅಪಾಯವನ್ನು ದಾಟಿ ಬಂದಿದ್ದಾರೆ ಎಂದು ವೈದ್ಯ ವಿನಿತ್ ಸೂರಿ ಹೇಳಿದ್ದಾರೆ. ಸದ್ಗುರುಗೆ 4 ವಾರಗಳ ಹಿಂದೆಯೇ ತಲೆನೋವು ಬಂದಿತ್ತು. ತಲೆನೋವು ವಿಪರೀತವಾಗಿದ್ದರೂ ಅದನ್ನು ಅವರು ನಿರ್ಲಕ್ಷ್ಯ ಮಾಡಿದ್ದರು. ತುಂಬಾ ತಲೆನೋವು ಇದ್ರೂ ಅದನ್ನ ಅವರು ನಿರ್ಲಕ್ಷ್ಯ ಮಾಡಿದ್ದರು. ಮಾರ್ಚ್ 8ರಂದು ಮಹಾಶಿವರಾತ್ರಿ ಆಚರಣೆಯಲ್ಲೂ ಪಾಲ್ಗೊಂಡಿದ್ದರು. ಈ ವೇಳೆ ಆರೋಗ್ಯ ಸಮಸ್ಯೆ ಆಗಿದ್ದರೂ ಅವರು ಯಾರಿಗೂ ಹೇಳಿರಲಿಲ್ಲ.
ಮಾರ್ಚ್ 15ರಂದು ಸಂಜೆ 4ಗಂಟೆಗೆ MRI ಸ್ಕ್ಯಾನ್ ಮಾಡಲು ವೈದ್ಯರು ಹೇಳಿದ್ದರು. ಆಗ ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದು ಪತ್ತೆಯಾಗಿದೆ.. ಅದರ ನಂತರವೂ ಅವರು ಎರಡು ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.