ಇಂದು ಕಾಂಗ್ರೆಸ್ ನಾಲ್ಕನೇ ಪಟ್ಟಿ ರಿಲೀಸ್; ಖರ್ಗೆ ಮನೆಯಲ್ಲಿ ಚರ್ಚೆ
ಬೆಂಗಳೂರು; ಕಾಂಗ್ರೆಸ್‌ನ ಇನ್ನೂ ಹದಿನೈದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಬಾಕಿ ಇದೆ. ತೀವ್ರ ಸ್ಪರ್ಧೆ ಹಾಗೂ ಕೆಲವರು ಬಿಜೆಪಿಯಿಂದ ಬರುವವರಿರುವುದರಿಂದ ಆ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡದೆ ಪೆಂಡಿಂಗ್ ಇಡಲಾಗಿತ್ತು. ಇಂದು ಮೂರನೇ ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಪಕ್ಕಾ ಆಗಿದೆ. ಇಂದು ಈ ಸಂಬಂಧ ಬೆಂಗಳೂರಿನ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಚರ್ಚೆ ನಡೆಸಲಾಗಿದೆ. ಮಾಜಿ ಸಿಎಂ ಸಿದ್ದಾರಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಡಿಸಿಎಂ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಈ ಸಭೆಯಲ್ಲಿ ಹಾಜರಿದ್ದರು. ಮಾಹಿತಿ ಪ್ರಕಾರ ಇಂದು ಹತ್ತು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗುತ್ತದೆ. ಉಳಿದ ಐದು ಕ್ಷೇತ್ರಗಳಿಗೆ ಕೊನೆ ಕ್ಷಣದಲ್ಲಿ ಮೌಖಿಕವಾಗಿ ಆದೇಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಪಕ್ಷದ ಪ್ರಣಾಳಿಕೆ ಬಿಡುಗಡೆ ಸಂಬಂಧವೂ ಈ ಸಭೆಯಲ್ಲಿ ಮಾತುಕತೆ ನಡೆದಿದೆ.